ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳು ಹೇಗೆ ಡೈರಿಯಲ್ಲಿಟ್ಟು ಮಾರಾಟ ಮಾಡುತ್ತಾರೋ ಹಾಗೇ ಇನ್ಮುಂದೆ ಕುರಿ ಮತ್ತು ಮೇಕೆ ಮಾಂಸವನ್ನು ಮಾರಾಟ ಮಾಡಲು ಬೆಂಗಳೂರಿನಲ್ಲಿ 200 ಮೀಟ್ ಪಾರ್ಲರ್ ಗಳನ್ನು ತೆಗೆಯಲು ಚಿಂತಿಸಲಾಗಿದೆ.
ತುಮಕೂರು ಜಿಲ್ಲೆಯ ಸಿರಾದಲ್ಲಿ 20 ಎಕರೆ ಜಾಗದಲ್ಲಿ ಈಗಾಗಲೇ ಎಲ್ಲಾ ರೀತಿಯ ವ್ಯವಸ್ಥೆ ನಡೆದಿದ್ದು, ಅಲ್ಲಿಂದಲೇ ಕುರಿ, ಮೇಕೆ ಕಟ್ ಮಾಡಿ ಮಾಂಸವನ್ನು ಶುದ್ಧವಾಗಿ ಮತ್ತು ಅಧುನಿಕತೆಯ ಟಚ್ ಕೊಟ್ಟು ಬೆಂಗಳೂರಿಗೆ ರವಾನಿಸಲಾಗುತ್ತದೆ.
Advertisement
Advertisement
ಪ್ರಾರಂಭದಲ್ಲಿ ಬೆಂಗಳೂರಿಗೆ ಮಾತ್ರ ಪೂರೈಸಿ ನಂತರದ ದಿನಗಳಲ್ಲಿ ಇಡೀ ಕರ್ನಾಟಕದ್ಯಂತ ಸುಮಾರು 700 ಮೀಟ್ ಪಾರ್ಲರ್ ಗಳನ್ನು ಸ್ಥಾಪನೆ ಮಾಡಿ ಗ್ರಾಹಕರಿಗೆ ಶುದ್ಧ ಮತ್ತು ಫ್ರೆಶ್ ಮಾಂಸವನ್ನು ಮಾರಾಟ ಮಾಡಲಾಗುವುದು.
Advertisement
ಕೇವಲ ಮಾಂಸ ಮಾತ್ರವಲ್ಲದೇ ಮಾಂಸದ ಎಲ್ಲಾ ರೀತಿಯ ಉತ್ಪನ್ನಗಳನ್ನು ಸಹ ಇದೇ ಮೀಟ್ ಪಾರ್ಲರ್ ಗಳ ಮೂಲಕ ಮಾರಾಟ ಮಾಡಲಾಗುವುದು. ಸದ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಒಂದು ಸರ್ವೆ ಮಾಡಿದ್ದು ಅದರಲ್ಲಿ ಶೇ. 79ರಷ್ಟು ಜನರು ಮಾಂಸ ಪ್ರಿಯರಾಗಿರೋದು ಬೆಳಕಿಗೆ ಬಂದಿದೆ. ಹಂತ ಹಂತವಾಗಿ ಮೀಟ್ ಪಾರ್ಲರ್‍ಗಳ ಸಂಖ್ಯೆ ಹೆಚ್ಚು ಮಾಡಿ ವಿದೇಶಗಳಿಗೆ ಮಾಂಸ ರಫ್ತು ಮಾಡುವ ಗುರಿ ಹೊಂದಲಾಗಿದೆ.