– ಯಾರಾದರೂ ಆಹಾರ ಕಿಟ್ ಕೊಟ್ರೆ ತೆಗೆದುಕೊಳ್ತೇನೆ
ಕೋಲಾರ: ಒಂದು ಲಕ್ಷ ಕೋಟಿಗೆ ಎಷ್ಟು ಸೊನ್ನೆಗಳು ಬರುತ್ತೆ ಅನ್ನೋದೇ ಗೊತ್ತಿಲ್ಲ. 1 ಲಕ್ಷ ಕೈಗೆ ಬಂದ್ರೆ ರಾತ್ರಿಯೆಲ್ಲಾ ಎಣಿಸುತ್ತೇನೆ ಎಂದು ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಕುರಿತು ವ್ಯಂಗ್ಯವಾಡಿದ್ರು.
Advertisement
ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕೆ.ಸಿ ವ್ಯಾಲಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2-3 ಸಾವಿರ ಎಣಿಸುತ್ತೇನೆ. ಆದರೆ 20 ಲಕ್ಷ ಕೋಟಿಗೆ ಎಷ್ಟು ಸೊನ್ನೆಗಳು ಬರುತ್ತೆ ಅನ್ನೋದು ಗೊತ್ತಿಲ್ಲ ಎಂದರು.
Advertisement
ಲಕ್ಷ ಕೋಟಿ ಬಗ್ಗೆ ವ್ಯಾಖ್ಯಾನ ಮಾಡಿ ಎಂದರೆ ನನಗೆ ಚಂದ್ರಯಾನ ಹೇಗಿರುತ್ತೆ ಅಂತ ಕೇಳಿದಾಗೆ ಆಗುತ್ತದೆ ಎಂದು ವ್ಯಂಗ್ಯವಾಡಿದರು. ಸರ್ಕಾರ ಕೊರೊನಾ ಪ್ಯಾಕೇಜ್ ಘೋಷಣೆ ಮಾಡಿದೆ, ಅದರ ಬಗ್ಗೆ ಮಾತನಾಡುವುದು ಸರಿಯಿಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇದ್ದೇನೆ, ನನಗಿಂತ ಆರ್ಥಿಕ ತಜ್ಞರು ಇದ್ದರೆ ಅವರು ಮಾತನಾಡುತ್ತಾರೆ. ನಾನು ಅಷ್ಟು ಮೇಧಾವಿ ಅಲ್ಲ ಎಂದರು.
Advertisement
Advertisement
ನಮ್ಮ ಹಿರಿಯ ನಾಯಕರು ರಾಹುಲ್ ಗಾಂಧಿ ಅವರು ತಜ್ಞರ ಜೊತೆ ಚರ್ಚಿಸಿ ಹೇಳಿಕೆ ನೀಡಿರುತ್ತಾರೆ ಎಂದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಜನ್ರಿಗೆ ಸಹಾಯ ಮಾಡುವಷ್ಟು ಶಕ್ತಿಯಿಲ್ಲ, ಯಾರಾದರೂ ದಿನಸಿ ಕಿಟ್ ಕೊಟ್ಟರೆ ನಾನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ರು.