ನವದೆಹಲಿ: ಭಾರತೀಯ ಸೇನೆಯು 20 ಕ್ಕೂ ಹೆಚ್ಚು ಮಿಲಿಟರಿ ಕುದುರೆ ಮತ್ತು 10 ಶ್ವಾನಗಳನ್ನು ಬಾಂಗ್ಲಾದೇಶ ಸೈನ್ಯಕ್ಕೆ ಉಡುಗೊರೆಯಾಗಿ ನೀಡಿದೆ.
Advertisement
ಭಾರತೀಯ ಸೇನೆ ಪಶುವೈದ್ಯಕೀಯ ಮತ್ತು ರಿಮೌಂಟ್ ದಳ ನೆಲಬಾಂಬ್ಗಳನ್ನು ಪತ್ತೆ ಹಚ್ಚುವ ತರಬೇತಿ ಪಡೆದಿರುವ 20 ಮಿಲಿಟರಿ ಕುದುರೆ ಮತ್ತು 10 ಶ್ವಾನಗಳನ್ನು ಬಾಂಗ್ಲಾದೇಶ ಸೈನ್ಯಕ್ಕೆ ಭಾರತೀಯ ಸೇನೆ ಉಡುಗೊರೆಯಾಗಿ ನೀಡಿದೆ. ಕಳೆದ ವರ್ಷ ಭಾರತ 10 ಶ್ವಾನಗಳನ್ನು ಬಾಂಗ್ಲಾದೇಶಕ್ಕೆ ಉಡುಗೊರೆಯಾಗಿ ನೀಡಿತ್ತು.
Advertisement
#IndianArmy gifted 20 military horses and 10 dogs trained on mine detection by Remount and Veterinary Corps #RVC to #BangladeshArmy delegation at Petrapole-Benapole Integrated Check Post on the #India – #Bangladesh Border. #IndiaBangladeshFreindship pic.twitter.com/N9Nt2UGoLB
— ADG PI – INDIAN ARMY (@adgpi) November 10, 2020
Advertisement
ಪೆಟ್ರಾಫೋಲ್ ಬೆನಾಪೋಲ್ ಇಂಟಿಗ್ರೇಟೆಡ್ ಪೋಸ್ಟ್ ಬಳಿ ಬಾಂಗ್ಲಾದೇಶ ಸೇನೆಯ ನಿಯೋಗ ಭಾರತೀಯ ಸೇನೆಯಿಂದ ಈ ಉಡುಗೊರೆಯನ್ನು ಸ್ವೀಕರಿಸಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸ್ನೇಹ ಸೌಹಾರ್ದವೃದ್ಧಿಗೆ ಈ ಉಡುಗೊರೆ ಸಹಾಯಕಾರಿಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ.
Advertisement
ಭಾರತೀಯ ಸೇನಾ ನಿಯೋಗವನ್ನು ಬ್ರಹ್ಮಾಸ್ತ್ರ ಕಾಪ್ಸ್ ಮುಖ್ಯಸ್ಥ ಮೇಜರ್ ಜನರಲ್ ನರಿಂದರ್ ಸಿಂಗ್ ಕ್ರೌಡ್ ನೇತೃತ್ವದಲ್ಲಿ ಕುದುರೆ ಮತ್ತು ಶ್ವಾನಗಳನ್ನು ಬಾಂಗ್ಲಾದೇಶ ಸೇನೆಗೆ ನೀಡಲಾಯಿತು. ಬಾಂಗ್ಲಾದೇಶ ಸೇನಾ ನಿಯೋಗವನ್ನು ಜೆಸ್ಸೋರ್ ಮೂಲದ ವಿಭಾಗದ ಕಮಾಂಡಿಂಗ್ ಮಾಡುತ್ತಿರುವ ಮೇಜರ್ ಜನರಲ್ ಮೊಹಮ್ಮದ್ ಹುಮಾಯೂನ್ ಕಬೀರ್ ನೇತೃತ್ವ ವಹಿಸಿದ್ದರು.