
-ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ
ಯಾದಗಿರಿ: 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಸೈನಿಕನಿಗೆ ಹುಟ್ಟೂರಾದ ಯಾದಗಿರಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
Advertisements
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳ್ಳುರು ಗ್ರಾಮದ ನಿವಾಸಿಯಾದ ವಿರೇಶ್ ಗುಳಬಾಳ ಅವರು 20 ವರ್ಷಗಳ ಕಾಲ ಜಮ್ಮುಕಾಶ್ಮೀರ,ರಾಜಸ್ತಾನ ಹಾಗೂ ವಿವಿಧೆಡೆ ಗಡಿಭಾಗದಲ್ಲಿ ಜೀವದ ಹಂಗು ತೊರೆದು ಶತ್ರುಗಳ ವಿರುದ್ಧ ಹೋರಾಟ ನಡೆಸಿ ದೇಶ ಸೇವೆ ಮಾಡಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಕೋಲ್ಕತ್ತಾಗೆ 6 ವಿಕೆಟ್ ಜಯ – ಪ್ಲೇ ಆಫ್ ಕನಸು ಜೀವಂತ
Advertisements
ಸದ್ಯ ಅವರು ಸೇನೆಯಿಂದ ನಿವೃತ್ತಿಹೊಂದಿದ್ದು, ಈ ಹಿನ್ನೆಲೆ ರಾಜನಕೊಳ್ಳುರು ಗ್ರಾಮಸ್ಥರು ಮತ್ತು ಗೆಳೆಯರ ಬಳಗದಿಂದ ಹುಣಸಗಿ ಪಟ್ಟಣದಿಂದ ರಾಜನಕೊಳ್ಳುರು ಗ್ರಾಮದವರಗೆ ಸುಮಾರು 7 ಕಿಮೀ ಭವ್ಯ ಮೆರವಣಿಗೆ ಮಾಡಲಾಯಿತು. ನಂತರ ರಾಜನಕೊಳ್ಳುರು ಗ್ರಾಮದಲ್ಲಿ ವಿರೇಶ್ ಅವರಿಗೆ ಹಾಗೂ ಅವರ ಪೋಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
Advertisements
Advertisements