ರಾಯಚೂರು: ವಿಜಯದಶಮಿ (Vijayadashami) ದಿನ ತಮ್ಮ ತಾತನಿಗೆ ಬನ್ನಿ ಕೊಡಲು ಹೋದ ಮೊಮ್ಮಕ್ಕಳ ಬಾಳಲ್ಲಿ ದುರಂತ ನಡೆದಿದೆ. ರಾಯಚೂರು ನಗರದ (Raichur City) ಡಿಸಿ ಬಂಗಲೆ ಬಳಿ ಸ್ಕೂಟರ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿದ್ದಾಳೆ, ಇನ್ನೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ರಸ್ತೆ ಅಪಘಾತದಲ್ಲಿ (Road Accident 20 ವರ್ಷದ ಸಾಕ್ಷಿ ಸಾವನ್ನಪ್ಪಿದ್ದು, ಇನ್ನೋರ್ವ ಯುವತಿ ಸಂಜನಾಳಿಗೆ ಗಂಭೀರ ಗಾಯಗಳಾಗಿವೆ. ನಿನ್ನೆ (ಶನಿವಾರ) ರಾತ್ರಿ ತಾತನ ಮನೆಗೆ ಬನ್ನಿ ಕೊಡಲು ಸಂಜನಾ ಹಾಗೂ ಸಾಕ್ಷಿ ತೆರಳಿದ್ದರು. ಬನ್ನಿ ಕೊಟ್ಟು ವಾಪಸ್ ಬರುವ ವೇಳೆ ರಸ್ತೆ ಕ್ರಾಸ್ ಮಾಡುತ್ತಿದ್ದಾಗ ನಗರದ ಬಸವೇಶ್ವರ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಭಾಗಮತಿ ಎಕ್ಸ್‌ಪ್ರೆಸ್ ರೈಲು ದುರಂತ – 18 ಗಂಟೆಗಳ ಬಳಿಕ ತೆರವು ಕಾರ್ಯಾಚರಣೆ ಯಶಸ್ವಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್‌ನಲ್ಲಿ ಹಿಂದೆ ಕುಳಿತಿದ್ದ ಸಾಕ್ಷಿ, ಕಾರಿನ ಮೇಲೆ ಬಿದ್ದು ಸಾವನ್ನಪ್ಪಿದ್ದಾಳೆ. ಸಂಜನಾಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಪಘಾತದ ಬಳಿಕ ಕಾರು ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ.
ಘಟನೆ ಹಿನ್ನೆಲೆ ರಾಯಚೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Tungabhadra Dam | ಒಳಹರಿವು ಹೆಚ್ಚಳ – ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ