3ರ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ- ಆರೋಪಿಗೆ 20 ವರ್ಷ ಜೈಲು, 1 ಲಕ್ಷ ದಂಡ

Public TV
1 Min Read
court order law

ಶಿವಮೊಗ್ಗ: ಮೂರು ವರ್ಷದ ಮಗುವಿನ (Child) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ (Jail Sentences) ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಶಿವಮೊಗ್ಗ ನ್ಯಾಯಾಲಯ (Shivamogga Court) ತೀರ್ಪು ನೀಡಿದೆ.

Shivamogga Court

ಜಿಲ್ಲೆಯ ಭದ್ರಾವತಿಯ ಗ್ರಾಮಾಂತರ ಠಾಣಾ (Police Station) ವ್ಯಾಪ್ತಿಯಲ್ಲಿ ಆರೋಪಿ ರಾಘವೇಂದ್ರ (27) ಮೂರು ವರ್ಷದ ಮಗು ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಮಗುವಿನ ತಾಯಿ ಭದ್ರಾವತಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ನೇಮಕ

court file

ಪ್ರಕರಣ (FIR) ದಾಖಲಿಸಿಕೊಂಡಿದ್ದ ಪೊಲೀಸರು (Police) ಆರೋಪಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *