– ಮಿಸ್ಡ್ ಕಾಲ್ ಮೂಲಕ ಪ್ರೀತಿ ಶುರು
ಲಕ್ನೋ: 60 ವರ್ಷದ ವೃದ್ಧೆ ಜೊತೆ 20 ವರ್ಷದ ಯುವಕ ಮದುವೆಯಾಗಿರುವ ಅಪರೂಪದ ಸಂಗತಿಯೊಂದು ಉತ್ತರ ಪ್ರದೇಶದ ಮಹೋರಾಬಾದ್ನಲ್ಲಿ ನಡೆದಿದೆ.
ರಾಮ್ಪುರದ ನಿವಾಸಿಯಾಗಿರುವ 60 ವರ್ಷದ ವೃದ್ಧೆ 20 ವರ್ಷದ ಯುವಕನ ಜೊತೆ ಮದುವೆಯಾಗಿದ್ದಾರೆ. ಈ ಮದುವೆ ಅಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಮಿಸ್ಡ್ ಕಾಲ್ ಮೂಲಕ ಇವರಿಬ್ಬರ ಪ್ರೀತಿ ಶುರುವಾಗಿದ್ದು, ಆಗಿನಿಂದ ಇಬ್ಬರು ಆತ್ಮೀಯವಾಗಿದ್ದಾರೆ. ಇದನ್ನೂ ಓದಿ: ಹನಿಮೂನ್ ಮುಗಿಸಿ ಬಂದ ಮಗ್ಳ ಪತಿಯನ್ನೇ ಮದ್ವೆಯಾದ ತಾಯಿ
ಎರಡು ವರ್ಷಗಳ ಹಿಂದೆ ಯುವಕ ತನ್ನ ಮೊಬೈಲಿನಲ್ಲಿ ಒಬ್ಬರಿಗೆ ಕರೆ ಮಾಡುತ್ತಿದ್ದ. ಈ ವೇಳೆ ಕರೆ ಮಿಸ್ ಆಗಿ ವೃದ್ಧೆಗೆ ಹೋಗಿದೆ. ಫೋನ್ ರಿಸೀವ್ ಮಾಡಿದ ವೃದ್ಧೆ ಆಗಿನಿಂದ ಯುವಕನ ಜೊತೆ ಮಾತನಾಡುತ್ತಿದ್ದಾರೆ. ಮೊಬೈಲಿನಲ್ಲಿ ಮಾತನಾಡುವಾಗ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.ಇದನ್ನೂ ಓದಿ: ವಧುವಿನ ತಾಯಿಯ ಜೊತೆ ವರನ ತಂದೆ ಪರಾರಿ- ಯುವ ಪ್ರೇಮಿಗಳ ಮದುವೆ ರದ್ದು
ನನ್ನ ಪತಿ ನಿಧನರಾಗಿದ್ದಾರೆ. ನೀನು ನನ್ನನ್ನು ಮದುವೆಯಾದ ಬಳಿಕ ನನ್ನ ಊರಿನಲ್ಲೇ ವಾಸಿಸಬೇಕು ಎಂದು ವೃದ್ಧೆ ಯುವಕನಿಗೆ ಷರತ್ತು ವಿಧಿಸಿದ್ದಾರೆ. ವೃದ್ಧೆಯ ಮಾತು ಕೇಳಿ ಯುವಕ ಶನಿವಾರ ಅವರ ಮನೆಗೆ ತಲುಪಿದ್ದು, ಅಲ್ಲಿ ಇಬ್ಬರು ಮದುವೆಯಾಗಿದ್ದಾರೆ. ತಾಯಿ 20 ವರ್ಷದ ಯುವಕನ ಜೊತೆ ಮದುವೆಯಾದ ವಿಷಯ ತಿಳಿದ ಮಗಳು ತನ್ನ ಪತಿಯ ಮನೆಯಿಂದ ತವರು ಮನೆಗೆ ಬಂದು ಇದನ್ನು ವಿರೋಧಿಸಿದ್ದಾಳೆ.