ಸೂರತ್: ಯುವತಿಯೊಬ್ಬಳು ರಸ್ತೆಬದಿಯಲ್ಲಿದ್ದ ಅಂಗಡಿ ಮಾಲೀಕನಿಗೆ ಬೆದರಿಸಿ ಆತನ ಹಣವನ್ನು ದೋಚಿ ಗೂಂಡಾಗಿರಿ ಮಾಡಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ.
ಅಸ್ಮಿತಾ ಅಲಿಯಾಸ್ ಬೂರಿ ಗೋಹಿಲಾ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಗೂಂಡಾಗಿರಿ ಮಾಡಿದ ಯುವತಿ. ಅಸ್ಮಿತಾ ಹಾಗೂ ಆಕೆಯ ಸ್ನೇಹಿತರು ಗೂಂಡಾಗಿರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಪೊಲೀಸರು ಆಸ್ಮಿತಾ ಹಾಗೂ ಆಕೆಯ ಸ್ನೇಹಿತರನ್ನು ಬಂಧಿಸಿದ್ದಾರೆ.
Advertisement
ಮೇ 21, 2018ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಸೂರತ್‍ನ ರಸ್ತೆಯಲ್ಲಿ ಅಸ್ಮಿತಾ ಅಂಗಡಿ ಮಾಲೀಕನ ಹತ್ತಿರ ತನ್ನ ಗೂಂಡಾಗಿರಿ ತೋರಿದ್ದಾಳೆ. ಅಸ್ಮಿತಾ ಬೆಳಗ್ಗೆ 6 ಗಂಟೆಗೆ ಲಾಂಗ್ ಬೀಸುತ್ತಾ ಪಾನ್ ಅಂಗಡಿ ಹತ್ತಿರ ಬಂದಿದ್ದಾಳೆ. ಅಂಗಡಿ ಮಾಲೀಕ ಏನೂ ನಡೆಯುತ್ತಿದೆ ಎಂದು ತಿಳಿಯುವುದರ ಮೊದಲೇ ಅಸ್ಮಿತಾ ಆತನಿಗೆ ಅವಾಜ್ ಹಾಕಿ ಅಂಗಡಿಯಲ್ಲಿದ್ದ ಹಣವನ್ನು ದೋಚಿದ್ದಾಳೆ.
Advertisement
Advertisement
ಅಸ್ಮಿತಾ ಅಂಗಡಿ ಹತ್ತಿರ ಬರುತ್ತಿದ್ದಂತೆ ಅಂಗಡಿ ಹತ್ತಿರ ಬೈಕಿನಲ್ಲಿ ಕುಳಿತಿದ್ದ ಇಬ್ಬರು ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಮಾಲೀಕನು ಕೂಡ ತನ್ನ ಅಂಗಡಿಯನ್ನು ಮುಚ್ಚಿ ಅಲ್ಲಿಂದ ಹೊರಟು ಹೋಗಿದ್ದಾನೆ. ಮಾಲೀಕನನ್ನು ಬೆದರಿಸಿದ ನಂತರ ಅಸ್ಮಿತಾ ಹಾಗೂ ಆಕೆಯ ಸ್ನೇಹಿತರು ದಾರಿಯಲ್ಲಿ ಹೋಗುತ್ತಿದ್ದ ಜನರ ಹತ್ತಿರ ಹಣವನ್ನು ವಸೂಲಿ ಮಾಡುತ್ತಿದ್ದಳು ಎಂದು ವರದಿಯಾಗಿದೆ.
Advertisement
ಅಸ್ಮಿತಾಳನ್ನು ಹೆದರಿಕೊಂಡು ಅಂಗಡಿ ಮಾಲೀಕ ಆಕೆಯ ವಿರುದ್ಧ ದೂರು ದಾಖಲಿಸಲು ಮುಂದಾಗಲಿಲ್ಲ. ಆದರೆ 3 ದಿನಗಳ ನಂತರ ಸಿಸಿಟಿವಿಯಲ್ಲಿ ಸೆರೆಯಾದ ಗೂಂಡಾಗಿರಿಯ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿತ್ತು. ಆಗ ಪೊಲೀಸರು ಆ ಅಂಗಡಿ ಮಾಲೀಕನನ್ನು ಹುಡುಕಿ ಆಕೆಯ ವಿರುದ್ಧ ಕಳ್ಳತನ, ಬೆದರಿಕೆ ಹಾಗೂ ಹೊಡೆದಾಟದ ಕೇಸನ್ನು ದಾಖಲಿಸಿಕೊಂಡರು.
ಈ ಹಿಂದೆ ಮಾರ್ಚ್ ತಿಂಗಳಲ್ಲಿ ಅಸ್ಮಿತಾಳ ಗೂಂಡಾಗಿರಿಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಅಸ್ಮಿತಾ ತನ್ನ ಸ್ನೇಹಿತರ ಜೊತೆಗೆ ನಡುರಸ್ತೆಯಲ್ಲಿ ಲಾಂಗ್ ಬೀಸುತ್ತಾ ಎಲ್ಲರನ್ನೂ ಹೆದರಿಸುತ್ತಿದ್ದಳು. ಈಗ ಮತ್ತೆ 2 ತಿಂಗಳ ನಂತರ ಅಸ್ಮಿತಾಳ ಮತ್ತೊಂದು ಗೂಂಡಾಗಿರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ಪೊಲೀಸರು ಈಗ ಆಕೆಯನ್ನು ಬಂಧಿಸಿದ್ದಾರೆ.
ಅಸ್ಮಿತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಈ ಹಿಂದೆ ಕೂಡ ಆಕೆಯ ಮೇಲೆ ಸಾಕಷ್ಟು ಕೇಸ್ ದಾಖಲಾಗಿದೆ. ಅಸ್ಮಿತಾಳನ್ನು ನೋಡಲು ಆಕೆಯ ಕುಟುಂಬದವರು ಇದುವರೆಗೂ ಬಂದಿಲ್ಲ. ಆದರೆ ಆಕೆಗೆ ಧೂಮಪಾನ ಅಥವಾ ಮದ್ಯಪಾನ ಮಾಡುವ ಅಭ್ಯಾಸವಿಲ್ಲ. ಆದರೆ ಗೂಂಡಾ ರೌಡಿಗಳ ಜೊತೆ ತಿರುಗಾಡುವುದು ಅಸ್ಮಿತಾಳ ಅಭ್ಯಾಸ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ.