ನೆಲಮಂಗಲ: ಶಿವ, ವೆಂಕಟರಮಣ, ಗಣೇಶ, ಆಂಜನೇಯ, ಅಯ್ಯಪ್ಪ, ಮುನೇಶ್ವರ ಸೇರಿದಂತೆ 20 ದೇವಾಲಯಗಳಿಗೆ ಈಗ ಸಂಕಷ್ಟ ಎದುರಾಗಿದೆ.
ಪ್ರತಿನಿತ್ಯ ನಮ್ಮ ಸಂಕಷ್ಟಗಳನ್ನ ದೂರ ಮಾಡಿ ಒಳ್ಳೆಯ ನೆಮ್ಮದಿ ಸಿಗಲೆಂದು ಮನೆಯ ಬಳಿ ಇರುವ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಮಾಡುತ್ತಿದ್ದ ಸುಮಾರು 20 ದೇವಾಲಯಗಳು ತೆರವಿಗೆ ಸಿದ್ಧವಾಗಿವೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಿವಿಧ ಗ್ರಾಮಗಳ ದೇವಾಲಯ ತೆರವಿಗೆ ನೆಲಮಂಗಲ ತಾಲೂಕು ಆಡಳಿತದಿಂದ ದೇವಾಲಯಗಳ ಪಟ್ಟಿ ಸಿದ್ಧವಾಗಿದ್ದು ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪಟ್ಟಿಯನ್ನ ತಾಲೂಕು ಆಡಳಿತ ಸಿದ್ಧಪಡಿಸಿದೆ. ಸೆಪ್ಟೆಂಬರ್ 2009ರ ಹಿಂದೆ ಗುರುತಿಸಲಾದ ಧಾರ್ಮಿಕ ಕಟ್ಟಡಗಳು ಹಾಗೂ 2009 ನಂತರದಲ್ಲಿ ರಸ್ತೆ, ಪಾರ್ಕ್ ಸಿಎ ಜಾಗದಲ್ಲಿ ನಿರ್ಮಿತವಾಗಿರುವ ದೇವಾಲಯಗಳ ತೆರವಿಗೆ ಅಧಿಸೂಚನೆ ಸಿದ್ಧಪಡಿಸಲಾಗಿದೆ ಎಂದುನೆಲಮಂಗಲ ತಹಶೀಲ್ದಾರ್ ಶ್ರೀನಿವಾಸಯ್ಯ ಹೇಳುತ್ತಾರೆ.
ಈಗಾಗಲೇ ಈ 20 ದೇವಾಲಯಗಳು ಸಾವಿರಾರು ಭಕ್ತರಿಂದ ಸಾಕಷ್ಟು ಪ್ರಸಿದ್ಧಿ ಪಡೆದಿರುವುದ್ದಾಗಿವೆ. ಅಧಿಕಾರಿಗಳ ತೀರ್ಮಾನಕ್ಕೆ ದೇವಾಲಯಗಳ ಅರ್ಚಕರು, ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ನೆಲಮಂಗಲ ತಾಲೂಕಿನಲ್ಲಿ ಬಲಾಡ್ಯರು, ರಾಜಕಾರಣಿಗಳು ಸಾಕಷ್ಟು ಪಾರ್ಕ್, ಸಿಎ ಜಾಗ, ರಸ್ತೆಯಗಳನ್ನ ಒತ್ತುವರಿ ಮಾಡಿದ್ದು, ಅವುಗಳನ್ನ ಮೊದಲು ತೆರವು ಮಾಡಬೇಕು ದೇವಾಲಯಗಳ ತೆರವಿನಿಂದ ಜನರ ಮೇಲಿನ ನಂಬಿಕೆಗೆ ಆಘಾತವಾಗಲಿದೆ ಎಂದು ಸ್ಥಳೀಯ ಹೇಮಂತ್ ಕುಮಾರ್ ಆಗ್ರಹಿಸಿದ್ದಾರೆ.
ಒಟ್ಟಾರೆ ಒಂದು ಕಡೆ ಸುಪ್ರೀಂಕೋರ್ಟಿನ ಆದೇಶ ಪಾಲನೆ ಮಾಡುವ ಅಧಿಕಾರಿಗಳು, ಮತ್ತೊಂದೆಡೆ ಸಾಕಷ್ಟು ವರ್ಷದಿಂದ ದೇವಾಲಯಕ್ಕೆ ತೆರಳಿ ಪೂಜೆ ಮಾಡುತ್ತಿದ್ದ ಅರ್ಚಕರು ಹಾಗೂ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಆ ದೇವರೆ ಈ ದೇವಾಲಯಗಳನ್ನ ಉಳಿಸುತ್ತಾನಾ ಇಲ್ಲ ಅಳಿಸುತ್ತಾನ ಎಂಬುದನ್ನು ಕಾದು ನೋಡಬೇಕಿದೆ.