ಶ್ರೀನಗರ: ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.
ಈ ಘಟನೆ ಬರಾಮುಲ್ಲಾದ ಉರಿಯಲ್ಲಿರುವ ಶ್ರೀನಗರ-ಮುಜಫರಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದೆ. ಎಸ್‍ಆರ್ ಟಿಸಿ ಬಸ್ ಇಂದು ಸಲಾಮಾಬಾದ್ ನಿಂದ ಉರಿಗೆ ಹೋಗುತ್ತಿತ್ತು. ಈ ವೇಳೆ ಶ್ರೀನಗರ-ಮುಜಫರಾಬಾದ್ ಹೆದ್ದಾರಿಯಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ರಸ್ತೆಯ ಕಬ್ಬಿಣದ ಡಿವೈಡರ್ ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಗದ್ದೆಗೆ ಪಲ್ಟಿಯಾಗಿದೆ.
Advertisement
ಬಸ್ ಪಲ್ಟಿಯಾದ ಪರಿಣಾಮ 20 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ರಕ್ಷಣೆಯ ಕಾರ್ಯಚರಣೆ ನಡೆಸಿದ್ದಾರೆ.
Advertisement
ಅಪಘಾತದಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಈ ಅಪಘಾತದಲ್ಲಿ 11 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ್ದಾರೆ.
Advertisement
#SpotVisuals More than 20 people injured in a bus accident in Baramulla's Uri. The bus met with an accident on Srinagar-Muzaffarabad highway. #JammuAndKashmir pic.twitter.com/B4P9m1HHuF
— ANI (@ANI) April 17, 2018
Advertisement