ಬೀಜಿಂಗ್: ಚೀನಾದಲ್ಲಿ (China) ಕೊರೊನಾ ವೈರಸ್ (Corona Virus) ಯುವಜನರ ಉದ್ಯೋಗಕ್ಕೂ ಪೆಟ್ಟು ಕೊಟ್ಟಿದೆ. ಸದ್ಯ ಚೀನಾದಲ್ಲಿ 2 ಕೋಟಿ ಯುವಜನರು ಕೆಲಸ ಕಳೆದುಕೊಂಡಿದ್ದಾರೆ.
ಚೀನಾದ ನಗರ ಪ್ರದೇಶದಲ್ಲಿ ಯುವಜನರ ಸಂಖ್ಯೆ 107 ಮಿಲಿಯನ್ ಇದೆ. ದೇಶದಲ್ಲಿ 16ರಿಂದ 24 ವರ್ಷದೊಳಗಿನ ಯುವಸಮುದಾಯ ಉದ್ಯೋಗ ಕಳೆದುಕೊಂಡಿದೆ. ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕರಲ್ಲಿ ಒಂದಾದ Xiaomi ಸಹ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದನ್ನೂ ಓದಿ: ತೈವಾನ್ ಮೇಲೆ ಮತ್ತೆ ಚೀನಾ ಕ್ಯಾತೆ – 71 ಯುದ್ಧ ವಿಮಾನಗಳಿಂದ ತಾಲೀಮು
ಚೀನಾದಲ್ಲಿ ನಿರುದ್ಯೋಗ ಪ್ರಮಾಣವು ಈ ವರ್ಷ ಗರಿಷ್ಠ ಮಟ್ಟವನ್ನು ತಲುಪಿದೆ. ಮಾರ್ಚ್‌ನಲ್ಲಿ ಶೇ.15.3 ರಿಂದ ಏಪ್ರಿಲ್‌ನಲ್ಲಿ ದಾಖಲೆಯ ಶೇ.18.2 ಏರಿದೆ. ಇದು ಮುಂದಿನ ಕೆಲವು ತಿಂಗಳುಗಳವರೆಗೆ ಮುಂದುವರಿಯಿತು. ಜುಲೈನಲ್ಲಿ ಶೇ.19.9ಕ್ಕೆ ತಲುಪಿತು. ಆಗಸ್ಟ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ.18.7 ಸ್ವಲ್ಪಮಟ್ಟಿಗೆ ಕುಸಿದಿದೆ ಎಂದು ಹಾಂಗ್‌ಕಾಂಗ್ ಪೋಸ್ಟ್ ತಿಳಿಸಿದೆ.
ಕೋವಿಡ್‌ನಿಂದಾಗಿ ನಿರುದ್ಯೋಗ ಸಮಸ್ಯೆ ನಿರ್ಮಾಣವಾಗಿದೆ. ಐವರಲ್ಲಿ ಒಬ್ಬರು ಉದ್ಯೋಗದಿಂದ ಹೊರಗುಳಿದಿದ್ದಾರೆ. ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುವುದರಿಂದ ದೇಶವು ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸಲು ಉಕ್ರೇನ್‌ನೊಂದಿಗೆ ಮಾತುಕತೆಗೆ ನಾವು ಸಿದ್ಧ: ಪುಟಿನ್
ಹಣಕಾಸಿನ ದಾಖಲೆಗಳ ಪ್ರಕಾರ, Xiaomi 2022 ರ ಮೊದಲ ಒಂಭತ್ತು ತಿಂಗಳುಗಳಲ್ಲಿ 1,900 ಉದ್ಯೋಗಿಗಳನ್ನು ವಜಾ ಮಾಡಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಂಪನಿಯು ಸುಮಾರು 35,000 ಉದ್ಯೋಗಿಗಳನ್ನು ಹೊಂದಿತ್ತು. ಅವರಲ್ಲಿ ಹೆಚ್ಚಿನವರು ಚೀನಾದಲ್ಲಿ ನೆಲೆಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ʼಶೂನ್ಯ ಕೋವಿಡ್ʼ ಕಠಿಣ ನಿಯಮಗಳಿಂದಾಗಿ ಕಂಪನಿಯ ಒಟ್ಟು ಶೇ.10 ಕುಸಿತ ಕಂಡಿತು.