ಬೆಂಗಳೂರು: ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯಾಗಿದ್ದು, 20 ಐಪಿಎಸ್ ಆಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ಹಾಲಿ ಉತ್ತರ ವಲಯದ ಐಜಿಪಿಯಾಗಿರುವ ಅಲೋಕ್ ಕುಮಾರ್ ಸಿಸಿಬಿ ಎಡಿಜಿಪಿ ಹುದ್ದೆಗೆ ವರ್ಗವಾಗಿದ್ದಾರೆ. ಬಿಎಸ್ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಗುಪ್ತಚರ ವಿಭಾಗಕ್ಕೆ ವರ್ಗವಾಗಿದ್ದ ಡಿಐಜಿ ಸಂದೀಪ್ ಪಾಟೀಲ್ ಔಟ್ ಆಗಿದ್ದು ಅವರು ಸಿಎಆರ್‌ಗೆ ವರ್ಗಾವಣೆಯಾಗಿದ್ದಾರೆ.
ಎಸಿಬಿಯಲ್ಲಿದ್ದ ಅಲೋಕ್ ಮೋಹನ್ ರೈಲ್ವೇ ಎಡಿಜಿಪಿ, ಪಿ ರವೀಂದ್ರನಾಥ್ ಎಡಿಜಿಪಿ ಅರಣ್ಯ ವಿಭಾಗ, ಸಂಜಯ್ ಸಹಾಯ್ ಎಡಿಜಿಪಿ ಪೊಲೀಸ್ ಕಂಪ್ಯೂಟರ್ ವಿಭಾಗ, ಎ.ಎಸ್ ಮೂರ್ತಿ ಎಡಿಜಿಪಿ ಲೋಕಾಯುಕ್ತ, ಎಲ್ ಸತೀಶ್ ಕುಮಾರ್, ಡಿಐಜಿ ಕೆಎಸ್‍ಆರ್‌ಪಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.
ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರು ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತು. ಯಾರೆಲ್ಲ ಈ ಕೆಲಸದಲ್ಲಿ ಭಾಗಿಯಾಗಿದ್ದರೋ ಅವರನ್ನು ಹೇಗೆ ಮಟ್ಟ ಹಾಕಬೇಕು ಎನ್ನುವುದು ನನಗೆ ತಿಳಿದಿದೆ ಎಂದು ಶುಕ್ರವಾರ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಈ ಹೇಳಿಕೆಗೆ ಪೂರಕ ಎಂಬಂತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv