ಕೋಲ್ಕತ್ತಾ: ಪ್ರಧಾನಿ ಮೋದಿಯವರ ರ‍್ಯಾಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮೇಲ್ಛಾವಣೆ ಏಕಾಏಕಿ ಕುಸಿದು 20 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ ದಲ್ಲಿ ನಡೆದಿದೆ.
ಇಂದು ಮಿಡ್ನಾಪುರದಲ್ಲಿ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ತಾತ್ಕಾಲಿಕ ನಿರ್ಮಿಸಿದ್ದ ಮೇಲ್ಛಾವಣೆ ಕುಸಿದು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಜನರನ್ನು ಹತ್ತಿರದ ಆಸ್ಪತ್ರೆಗೆ ಬೈಕ್ ಹಾಗೂ ಅಂಬುಲೆನ್ಸ್ ಗಳಲ್ಲಿ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ.
Advertisement
ಮೇಲ್ಛಾವಣೆ ಕುಸಿದ ಗಾಯಗೊಂಡ ವಿಷಯ ತಿಳಿದ ಪ್ರಧಾನಿ ಮೋದಿಯವರು ತಮ್ಮ ಕಾರ್ಯಕ್ರಮದ ನಂತರ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗ-ಕ್ಷೇಮ ವಿಚಾರಿಸಿದ್ದಾರೆ.
Advertisement
#WATCH PM Narendra Modi tears up while talking to one of the injured people in hospital. Several were injured after a portion of a tent collapsed during PM's rally in Midnapore earlier today. #WestBengal pic.twitter.com/04AOX9CJri
— ANI (@ANI) July 16, 2018
Advertisement
ಇಂದು ಬೆಳಗ್ಗೆ ನರೇಂದ್ರ ಮೋದಿಯವರ ಬೃಹತ್ ರ‍್ಯಾಲಿಯನ್ನು ಜಿಲ್ಲೆಯ ಮಿಡ್ನಾಪುರದಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಜನ ಮೋದಿಯವರನ್ನು ಕಣ್ತುಂಬಿಕೊಳ್ಳಬೇಕಂಬ ಬಯಕೆಯಿಂದ ಜನ ರಸ್ತೆ ಬದಿಯಿದ್ದ, ತಾತ್ಕಾಲಿಕ ಮೇಲ್ಚಾವಣಿಯ ಕಂಬವನ್ನು ಏರಿದ್ದಾರೆ. ಏರಿದ್ದಾರೆ. ಅಲ್ಲದೇ ಬೆಳಿಗ್ಗೆಯಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಮೇಲ್ಛಾವಣೆ ಸಂಪೂರ್ಣ ನೆನೆದು ಹೋಗಿತ್ತು. ತಾತ್ಕಾಲಿಕ ಮೇಲ್ಛಾವಣೆಗೆ ಭಾರ ಹೆಚ್ಚಿದ್ದರಿಂದ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ.
Advertisement
The syndicate operating here is just for the sake of votebank and for just to stay in power. It alienates the rest of the people of West Bengal:PM Modi in Midnapore pic.twitter.com/HGRqxQD4BI
— ANI (@ANI) July 16, 2018