ಅಮರಾವತಿ: ಆಂಧ್ರದ ತಿರುಪತಿ ದೇವಾಲಯದಲ್ಲಿ ಕಲಬೆರಕೆ ತುಪ್ಪ (Adulterated Ghee) ಬಳಸಿ ಅಂದಾಜು 20 ಕೋಟಿ ಲಡ್ಡುಗಳನ್ನು (Tirupati Laddu) ತಯಾರಿಸಿ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019-2024ರ ಅವಧಿಯಲ್ಲಿ ವಿತರಿಸಲಾದ ಒಟ್ಟು 48.76 ಕೋಟಿ ಲಡ್ಡುಗಳಲ್ಲಿ ಇದೂ ಒಂದು ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD) ಟ್ರಸ್ಟ್ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ. ದೇವಾಲಯದಲ್ಲಿ ದೈನಂದಿನ ಜನದಟ್ಟಣೆ, ಖರೀದಿ ವಿವರಗಳು ಮತ್ತು ಉತ್ಪಾದನೆ ಮತ್ತು ಮಾರಾಟದ ಅಂಕಿಅಂಶಗಳ ಆಧಾರದಲ್ಲಿ ಎಷ್ಟು ಕೋಟಿ ಲಡ್ಡು ವಿತರಣೆ ಆಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಯಾವ ಸಿಎಂ ಇವತ್ತು ಅಧಿಕಾರದಲ್ಲಿದ್ದಾರೋ ಅವ್ರನ್ನ ಅಂದು ಡಿಸಿಎಂ, ಹಣಕಾಸು ಮಂತ್ರಿ ಮಾಡಿದ್ದೇ ನಾನು: ಹೆಚ್‌ಡಿಡಿ
ಕಳೆದ ವರ್ಷ ಈ ಕಲಬೆರಕೆ ತುಪ್ಪ ತಯಾರಿಸಿ ಲಡ್ಡು ತಯಾರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ಈಗ ಕೇಂದ್ರ ತನಿಖಾ ದಳದ ನೇತೃತ್ವದ ಎಸ್‌ಐಟಿ ತನಿಖೆ ನಡೆಸುತ್ತಿದೆ. ಸುಮಾರು 250 ಕೋಟಿ ರೂ. ಮೌಲ್ಯದ 68 ಲಕ್ಷ ಕೆಜಿ ಕಲಬೆರಕೆ ತುಪ್ಪವನ್ನು – ಪಾಮ್ ಎಣ್ಣೆ, ಪಾಮ್ ಕರ್ನಲ್ ಎಣ್ಣೆ ಮತ್ತು ಇತರ ವಿಷಕಾರಿ ಪದಾರ್ಥಗಳೊಂದಿಗೆ ಬೆರೆಸಿ ಉತ್ತರಾಖಂಡದ ಭೋಲೆ ಬಾಬಾ ಡೈರಿ ಮತ್ತು ಅದರ ಶೆಲ್ ಕಂಪನಿಗಳು ಪೂರೈಸಿವೆ ಎಂದನ್ನು ಪತ್ತೆ ಮಾಡಲಾಗಿದೆ. ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಹೈಟೆಕ್ ಆಗಲಿದೆ ನಾಗವಾರ ಸ್ಟೇಷನ್
ಈ ಐದು ವರ್ಷಗಳಲ್ಲಿ ಸುಮಾರು 11 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರಸಾದವನ್ನು ಪ್ರತ್ಯೇಕವಾಗಿ ಲೇಬಲ್ ಮಾಡದ ಕಾರಣ, ಯಾವ ಭಕ್ತರು ಕಲಬೆರಕೆ ಲಡ್ಡುಗಳನ್ನು ಸ್ವೀಕರಿಸಿದ್ದಾರೆಂದು ತಿಳಿಯಲು ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪಲ್ಲ: ಮಂಕಾಳ ವೈದ್ಯ
