ಬಿಜೆಪಿ, ಜೆಡಿಎಸ್‌ನ 20-25 ಶಾಸಕರು ಕಾಂಗ್ರೆಸ್‌ಗೆ ಅಪ್ಲಿಕೇಶನ್ ಹಾಕಿದ್ದಾರೆ: ಎಂ ಲಕ್ಷ್ಮಣ್

Advertisements

ಮಡಿಕೇರಿ: ಸಿದ್ದರಾಮೋತ್ಸವ ಆದ ಬಳಿಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅವಕಾಶ ಕೊಡಿ ಅಂತ ಬಿಜೆಪಿ, ಜೆಡಿಎಸ್‌ನವರು ಅರ್ಜಿ ಹಾಕಿದ್ದಾರೆ. ಸುಮಾರು 20-25 ಶಾಸಕರು ಕಾಂಗ್ರೆಸ್‌ಗೆ ಅಪ್ಲಿಕೇಶನ್ ಹಾಕಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಅವರು, ತಮಗೆ ಇರುವ ಖಚಿತ ಮಾಹಿತಿ ಪ್ರಕಾರ 20-25 ಜನ 2 ಪಕ್ಷದಿಂದ ಬರುತ್ತಾರೆ. ಅವರು ಈಗಾಗಲೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಅನಧಿಕೃತವಾಗಿ ಭೇಟಿಯೂ ಮಾಡಿದ್ದಾರೆ. ಅದರಲ್ಲಿ ಬಿಜೆಪಿಯ 9 ಹಾಗೂ ಜೆಡಿಎಸ್‌ನ 11 ಹಾಲಿ ಹಾಗೂ ಮಾಜಿ ಶಾಸಕರು ಇದ್ದಾರೆ. ಅವರು ಅಧಿಕೃತವಾಗಿ ಅರ್ಜಿ ಹಾಕಿದ ಮೇಲೆ ಅದನ್ನು ಸಮಿತಿಗೆ ಕಳುಹಿಸುತ್ತೇವೆ. ಸಮಿತಿ ಅವರನ್ನು ತೆಗೆದುಕೊಳ್ಳಬೇಕೋ ಬೇಡವೋ ಅಂತ ನಿರ್ಧಾರ ಮಾಡುತ್ತದೆ ಎಂದಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್‍ನವರಿಗೆ ತಲೆ ಕೆಟ್ಟಿದೆ ಅದಕ್ಕೆ ಸಿಎಂ ಬದಲಾವಣೆ ಎನ್ನುತ್ತಿದ್ದಾರೆ: ಆರಗ ಜ್ಞಾನೇಂದ್ರ

Advertisements

ಸಿದ್ದರಾಮೋತ್ಸವ ಆದ ಬಳಿಕ ಯುವಕರಲ್ಲಿ ಭಾರೀ ಬದಲಾವಣೆ ಕಾಣುತ್ತಿದೆ. ಬಿಜೆಪಿಯವರಿಂದ ಯಾವ ಲಾಭವೂ ಇಲ್ಲ ಎಂಬುದು ಈಗಾಗಲೇ ಯುವಕರಿಗೆ ಅರಿವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನವಾಗಲಿದೆ ಎಂದು ಭವಿಷ್ಯ ನುಡಿದಿದರು. ಇದನ್ನೂ ಓದಿ: ‘ಗಾಂಧೀಜಿಯನ್ನು ಕೊಂದಿದ್ದು ನಾವೇ’ ಎಂದ ಹಿಂದೂ ಮಹಾಸಭಾದ ಅಧ್ಯಕ್ಷನ ವಿರುದ್ಧ ಕಾಂಗ್ರೆಸ್ ದೂರು

ಈ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ 14 ಜನರು ಮರಳಿ ಬಂದರೂ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಅದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಮೊದಲೇ ಹೇಳಿದ್ದಾರೆ. ಬಂದವರನ್ನೆಲ್ಲಾ ಮನೆಗೆ ತುಂಬಿಸಿಕೊಳ್ಳುವ ಬಿಜೆಪಿಯಂತಹ ಕೆಲಸ ನಾವು ಮಾಡಲ್ಲ. ಕಳ್ಳರು, ಚಿಲ್ಲರೆಗಳನ್ನೆಲ್ಲಾ ನಾವು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದರು.

Live Tv

Advertisements
Exit mobile version