– ಕೋಣೆಯಲ್ಲಿ ಮಲಗಿದ್ದಾಗ ಕೃತ್ಯವೆಸಗಿದ
– ಆರೋಪಿಯನ್ನ ಪೊಲೀಸರಿಗೆ ಒಪ್ಪಿಸಿದ ಕುಟುಂಬ
ಚೆನ್ನೈ: ಪಾಪಿ ಯುವಕನೊಬ್ಬ 90 ವರ್ಷದ ಅಜ್ಜಿಯ ಮೇಲೆ ಅತ್ಯಾಚಾರವೆಸಗಿದ ಅಚ್ಚರಿಯ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.
ಆರೋಪಿ ಯುವಕನನ್ನು ಮೈಡೀನ್ ಎಂದು ಗುರುತಿಸಲಾಗಿದೆ. ಈ ಘಟನೆ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿ ಪ್ರದೇಶದಲ್ಲಿರುವ ವೃದ್ಧೆಯ ಮನೆಯಲ್ಲಿ ನಡೆದಿದೆ.
ಆರೋಪಿ ಕುಮಾರನ್ ನಗರ ನಿವಾಸಿ. ಈತ ಕೂಲಿ ಕಾರ್ಮಿಕನಾಗಿದ್ದು, ಮದ್ಯದ ಅಮಲಿನಲ್ಲಿ ಈ ಕೃತ ಎಸಗಿದ್ದಾನೆ ಎಮದು ಪೊಲೀಸರು ತಿಳಿಸಿದ್ದಾರೆ. ವೃದ್ಧೆ ಜಮೀನಿನಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ಮಲಗಿದ್ದ ವೇಳೆ ಆರೋಪಿ ಮನೆಯೊಳಗಡೆ ನುಗ್ಗಿದ್ದಾನೆ. ಅಲ್ಲದೆ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇನ್ನೊಂದು ಕೋಣೆಯಲ್ಲಿ ವೃದ್ಧೆಯ 55 ವರ್ಷದ ಮಗ ತನ್ನ ಕುಟುಂಬದ ಜೊತೆ ಕೂಡ ಮಲಗಿದ್ದನು.
ರಾತ್ರಿ 11 ಗಂಟೆಯ ಸುಮಾರಿಗೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ತಾಯಿಯ ಕೂಗು ಕೇಳುತ್ತಿದ್ದಂತೆಯೇ ಎಚ್ಚೆತ್ತ ಮಗ ಆಕೆಯನ್ನು ರಕ್ಷಿಸಲು ಮುಂದಾಗಿದ್ದಾನೆ. ಇದೇ ಸಂದರ್ಭದಲ್ಲಿ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆಯ ಮರುದಿನವೇ ವೃದ್ಧೆಯ ಮಗ ಹಾಗೂ ಕುಟುಂಬಸ್ಥರು ಆರೋಪಿಯನ್ನು ಹಿಡಿದು ಪೊಲ್ಲಾಚಿ ಪಶ್ಚಿಮ ಪೊಲೀಸ್ ಠಾನೆಗೆ ಒಪ್ಪಿಸಿದ್ದಾರೆ. ಅಲ್ಲದೆ ಆತನ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.