ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರ ಈಗ ಫುಲ್ ಅಲರ್ಟ್ ಆಗಿದೆ. “ಮಾಸ್ಕ್ ಹಾಕ್ಕೊಳ್ಳಿ, ಜೀವ ಉಳಿಸಿಕೊಳ್ಳಿ” ಸದ್ಯಕ್ಕೆ ಇದೊಂದೆ ಲಸಿಕೆ ಸರ್ಕಾರದ ಬಳಿ ಇದ್ದು ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಮಾಸ್ಕ್ ವಿಚಾರದಲ್ಲಿ ಸರ್ಕಾರದಿಂದ ಖಡಕ್ ನಿರ್ಧಾರ ಪ್ರಕಟಗೊಂಡಿದ್ದು, ಇನ್ಮುಂದೆ ಮಾಸ್ಕ್ ಹಾಕೊಳ್ಳದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಲಾಕ್‍ಡೌನ್ ಮಾಡುವುದಿಲ್ಲ ಎಂದು ಹೇಳಿರುವ ಸರ್ಕಾರ ಈಗ ಇಂದಿನಿಂದ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
Advertisement
Advertisement
ದಂಡ ಎಷ್ಟು?
ನಗರ ಪ್ರದೇಶಗಳಲ್ಲಿ ಮಾಸ್ಕ್ ಹಾಕದಿದ್ರೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ಹಾಕಲಾಗುತ್ತದೆ. ಅಂಗಡಿ, ಮಾಲ್, ಮಾರ್ಕೇಟ್, ಬಸ್ ನಿಲ್ದಾಣಗಳಲ್ಲೂ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲಾಗುತ್ತದೆ.
Advertisement
ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಇದ್ದರೆ ಮಾತ್ರ ಸರ್ಕಾರಿ ಕಚೇರಿ ಪ್ರವೇಶಿಲು ಅನುಮತಿ ನೀಡಲಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಸಾಮಾಜಿಕ ಅಂತರ ಪಾಲನೆಗೆ ಒತ್ತು ನೀಡಲಾಗಿದೆ.