– ಸಾರ್ವಜನಿಕರಿಂದ ಭಾರೀ ಮೆಚ್ಚುಗೆ
ದಾವಣಗೆರೆ: ರಾಜ್ಯದಲ್ಲಿ ಆಕ್ಸಿಜನ್ ಗೆ ಹಾಹಾಕಾರ ಆರಂಭವಾಗಿದೆ. ದಾವಣಗೆರೆ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ.
Advertisement
ಹೌದು. ಹರಿಹರದ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಕೊರತೆ ಎದುರಾಗುವ ಸಂಭವವಿತ್ತು. ಆದರೆ ಶಾಸಕ ರೇಣುಕಾಚಾರ್ಯ ಅವರಿಂದ ಭಾರೀ ದುರಂತವೊಂದು ತಪ್ಪಿದ್ದು, ರೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
Advertisement
Advertisement
ಆಸ್ಪತ್ರೆಯಲ್ಲಿ 20 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. 3 ಗಂಟೆಗೆ ಆಗುವಷ್ಟು ಮಾತ್ರ ಆಕ್ಸಿಜನ್ ಉಳಿದಿತ್ತು. ಈ ವಿಚಾರ ತಿಳೀಯುತ್ತಿದ್ದಂತೆಯೇ ಶಾಸಕರು ಹರಹರದ ಸದರಿನ್ ಗ್ಯಾಸ್ ಲಿಮಿಟೆಡ್ ನಿಂದ ಅಕ್ಸಿಜನ್ ಸಪ್ಲೇ ಮಾಡಿದರು. ಈ ಮೂಲಕ ಕೊರೊನಾ ರೋಗಿಗಳ ಅಮೂಲ್ಯ ಜೀವ ಉಳಿಸಿದ್ದಾರೆ.
Advertisement
ಬಳಿಕ ಪಿಪಿಇ ಕಿಟ್ ಧರಿಸಿ ವೆಂಟಿಲೇಟರ್ ವಾರ್ಡಿಗೆ ಶಾಸಕರು ಭೇಟಿ ನೀಡಿದ್ದಾರೆ. ಅಲ್ಲದೆ ಆಸ್ಪತ್ರೆಯ ಆಕ್ಸಿಜನ್ ಬೆಡ್‍ನಲ್ಲಿ 20 ಮಂದಿಯ ಆರೋಗ್ಯ ವಿಚಾರಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. ಒಂದು ವೇಳೆ ಶಾಸಕರು ಈ ಕೆಲಸೇ ಮಾಡದೇ ಇರುತ್ತಿದ್ದರೆ 20 ಮಂದಿ ರೋಗಿಗಳ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಆದರೆ ರೇಣುಕಾಚಾರ್ಯ ಅವರ ಮಹಾನ್ ಕೆಲಸದಿಂದ 20 ಮಂದಿಯ ಜೀವ ಉಳಿದಿದೆ.
ಶಾಸಕರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಶಾಸಕರು ಈ ಹಿಂದೆಯೂ ಅನೇಕ ರೀತಿಯಲ್ಲಿ ಸಹಾಯ ಮಾಡುವ ಮೂಲಕ ಜನಮನ ಗೆದ್ದಿದ್ದಾರೆ.