ಬೆಂಗಳೂರು: ಮಹಾಮಾರಿ ಕೊರೊನಾದಿಂದ 20 ವರ್ಷದ ಬಳಿಕ ಈ ಬಾರಿ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ.
ಪ್ರತಿ ವರ್ಷ ಸ್ವಾತಂತ್ರ್ಯ ದಿನಚರಣೆಗೆ ಫ್ಲವರ್ ಶೋ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಭಯದಿಂದಾಗಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ತೋಟಗಾರಿಕಾ ಸಂಘದ ಸಹಯೋಗದಲ್ಲಿ ಲಾಲ್ಬಾಗ್ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತಿತ್ತು.
Advertisement
Advertisement
ಪ್ರತಿವರ್ಷ ಫ್ಲವರ್ ಶೋಗೆ ಎರಡು ತಿಂಗಳಿಂದಲೇ ಸಿದ್ಧತೆಗಳನ್ನ ನಡೆಸಲಾಗುತ್ತಿತ್ತು. ಜೊತೆಗೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿಯೇ ಪ್ರದರ್ಶನಕ್ಕೆ ಅನುವು ಮಾಡಲಾಗುತ್ತಿತ್ತು. ಆದರೆ ಈ ವರ್ಷ ಆಗಸ್ಟ್ ಮೊದಲವಾರ ಬಂದರೂ ಯಾವುದೇ ಸಿದ್ಧತೆಗಳು ನಡೆದಿಲ್ಲ. ಫ್ಲವರ್ ಶೋಗೆ ಲಕ್ಷಾಂತರ ಮಂದಿ ಲಾಲ್ಬಾಗ್ಗೆ ಬರುತ್ತಾರೆ. ಇದರಿಂದ ಕೊರೊನಾ ಸೋಂಕು ಹೆಚ್ಚಾಗಬಹುದು ಎಂಬ ಕಾರಣಕ್ಕಾಗಿ ಈ ಬಾರಿಯ ಫ್ಲವರ್ ಶೋವನ್ನು ರದ್ದುಪಡಿಸಲಾಗುತ್ತಿದೆ.
Advertisement
Advertisement
1912 ರಿಂದ ಆರಂಭವಾದ ಫ್ಲವರ್ ಶೋ 108 ವರ್ಷಗಳ ಕಾಲ ಸತತವಾಗಿ ಆಚಾರಿಸಿಕೊಂಡು ಬಂದಿದೆ. ಆದರೆ ಕೊರೊನಾದಿಂದ 20 ವರ್ಷದ ಬಳಿಕ ಈ ಬಾರಿ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ.