ಲಕ್ನೋ: ಅತ್ಯಾಚಾರ ಎಸಗಿ ಬಳಿಕ ಕತ್ತು ಹಿಸುಕಿ ಕೊಲೆಗೈದ ಸ್ಥಿತಿಯಲ್ಲಿ 3 ವರ್ಷದ ಬಾಲಕಿಯ ಮೃತದೇಹ ಉತ್ತರಪ್ರದೇಶದ ಲಕ್ಷ್ಮೀಪುರಖೇರಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ. ಈ ಘಟನೆ ಸೇರಿ ಕಳೆದ 20 ದಿನಗಳಲ್ಲಿ ಜಿಲ್ಲೆಯಲ್ಲಿ ಇದು ಮೂರನೇ ಪ್ರಕರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಬುಧವಾರದಿಂದ ನಾಪತ್ತೆಯಾಗಿದ್ದಳು. ಇದೀಗ ಆಕೆಯ ಮೃತದೇಹ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
Advertisement
Advertisement
ಬಾಲಕಿಯ ತಂದೆ ಅದೇ ಗ್ರಾಮದ ವ್ಯಕ್ತಿಯೊಬ್ಬನ ಮೇಲೆ ಅನುಮಾನಪಟ್ಟು ದೂರು ದಾಖಲಿಸಿದ್ದಾರೆ. ಅಲ್ಲದೇ ಆತ ನಮ್ಮ ಕುಟುಂಬದ ಮೇಲಿನ ಸಿಟ್ಟಿನಿಂದ ನನ್ನ ಮಗಳನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ದೂರಿದ್ದಾರೆ. ಬಾಲಕಿಯ ತಂದೆಯ ಹೇಳಿಕೆಯಂತೆ ಇದೀಗ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಾಗಿ ಬಲೆ ಬೀಸಲಾಗಿದೆ ಎಂದು ಲಕ್ಷ್ಮಿಪುರ ಎಸ್ಪಿ ತಿಳಿಸಿದ್ದಾರೆ.
Advertisement
Advertisement
ಇದೇ ಜಿಲ್ಲೆಯಲ್ಲಿ ಈ ಹಿಂದೆ 17 ವರ್ಷದ ಹುಡುಗಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಆಕೆಯ ಮೃತದೇಹ ಕೂಡ ಗ್ರಾಮದಿಂದ 200 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಇದಕ್ಕೂ ಮೊದಲು 13 ವರ್ಷದ ಬಾಲಕಿಯನ್ನು ರೇಪ್ ಮಾಡಿ ಹತ್ಯೆ ಮಾಡಲಾಗಿತ್ತು. ಸರಣಿ ಘಟನೆಗಳಿಂದ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ.
ಮಧ್ಯಾಹ್ನದ ಬಳಿ ಕಬ್ಬಿನ ಗದ್ದೆಗೆ ಹೋದ 13 ವರ್ಷದ ಬಾಲಕಿ ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ಪೋಷಕರು ಹುಡುಕಾಟ ನಡೆಸಿದ್ದರು. ಈ ವೇಳೆ ಬಾಲಕಿಯ ಮೃತದೇಹ ಗದ್ದೆಯಲ್ಲಿ ಕಬ್ಬುಗಳ ಮಧ್ಯೆ ಪತ್ತೆಯಾಗಿತ್ತು.
Lakhimpur Kheri: A 3-year-old girl was found dead in Matehiya. Satyendra Kumar Singh, Superintendent of Police said, "The body has been sent for post-mortem. We are investigating the matter and stringent action will be taken against accused." (3.09.2020) pic.twitter.com/9Ks53sMKOA
— ANI UP/Uttarakhand (@ANINewsUP) September 3, 2020