ಭೋಪಾಲ್: ರಸ್ತೆ ಬದಿಗೆ ತುಂಬಾ ಹೊತ್ತು ನಿಂತಿದ್ದ ಟ್ರಕ್ ಅನ್ನು ಅನುಮಾನದಿಂದ ಪೊಲೀಸರು ಪರಿಶೀಲಿಸಿದಾ 2 ಲಕ್ಷಕ್ಕೂ ಅಧಿಕ ಲಸಿಕೆ ಇರುವುದು ಪತ್ತೆಯಾಗಿದೆ.
Advertisement
ಮಧ್ಯಪ್ರದೇಶ ಕರೇಲಿ ಬಸ್ನಿಲ್ದಾಣದ ಬಳಿ ನರ್ಸಿಂಗ್ಪುರ್ನಲ್ಲಿ ನಿಂತಿದ್ದ ಟ್ರಕ್ವೊಂದನ್ನು ಪೊಲೀಸರು ತಪಾಸಣೆ ನಡಸಿದಾಗ ಅದರಲ್ಲಿ 2,40,000 ಕೊವ್ಯಾಕ್ಸಿನ್ ಲಸಿಕೆ ಇರುವುದು ಪತ್ತೆಯಾಗಿದೆ. ಟ್ರಕ್ ತುಂಬಾ ಸಮಯದಿಂದ ಒಂದೇ ಕಡೆ ನಿಂತಿತ್ತು.ಹೀಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಟ್ರಕ್ನಲ್ಲಿ ಸಿಕ್ಕ ಲಸಿಕೆ ಸರಿಸುಮಾರು 8 ಕೋಟಿ ರೂಪಾಯಿ ಬೆಲೆ ಬಾಳುವಂತದ್ದು ಎಂದು ತಿಳಿದು ಬಂದಿದೆ.
Advertisement
Advertisement
ಗಾಡಿ ನಂಬರ್ ನೋಡಿ ಯಾರದ್ದೇಂದೂ ಪತ್ತೆ ಹಚ್ಚಿ ಡ್ರೈವರ್ ಮೊಬೈಲ್ ಲೊಕೇಶನ್ ಕೂಡ ಪೊಲೀಸರು ಟ್ರ್ಯಾಕ್ ಮಾಡಿದ್ದಾರೆ. ಆರೋಪಿಗಳ ಜಾಡು ಹಿಡಿದು ಹೋರಟ ಪೊಲೀಸರಿಗೆ ಚಾಲಕನ ಮೊಬೈಲ್ ಹೆದ್ದಾರಿ ಪಕ್ಕದ ಪೊದೆಯೊಂದರಲ್ಲಿ ಸಿಕ್ಕಿದೆ. ಟ್ರಕ್ ಏರ್ಕಂಡೀಶನ್ ಕೂಡ ಕಾರ್ಯನಿರ್ವಹಿಸುತ್ತಿದೆ. ಲಸಿಕೆಗಳು ಸುರಕ್ಷಿತವಾಗಿವೆ. ಚಾಲಕ ಮತ್ತು ನಿರ್ವಾಹಕನನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ ಎಂದು ಕರೇಲಿ ಠಾಣೆಯ ಆಶೀಶ್ ಬೋಪಾಚೆ ತಿಳಿಸಿದ್ದಾರೆ.