ಮಂಡ್ಯ: ಹೊಸವರ್ಷಾಚರಣೆ ಮುಗಿಸಿಕೊಂಡು ಬೈಕ್‍ನಲ್ಲಿ ವಾಪಸ್ ಬರುವಾಗ ಬ್ಯಾರಿಕೇಡ್‍ಗೆ ಬೈಕ್ ಡಿಕ್ಕಿ ಹೊಡೆದು ಗೆಳೆಯರಿಬ್ಬರು ಮೃತಪಟ್ಟಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೌಡೇನಹಳ್ಳಿ ಸಮೀಪ ನಡೆದಿದೆ.
Advertisement
23 ವರ್ಷದ ಯುವಕರಾದ ಪವನ್ ಮತ್ತು ಪ್ರದೀಪ್ ಮೃತ ದುರ್ದೈವಿಗಳು. ಹುಲಿಯೂರು ದುರ್ಗದಲ್ಲಿ ಅಕ್ಕನ ಮನೆಯಲ್ಲಿದ್ದ ಪವನ್‍ನನ್ನು ಗೆಳೆಯ ಪ್ರದೀಪ್ ಹೊಸ ವರ್ಷದ ಆಚರಣೆಗಾಗಿ ಊರಿಗೆ ಕರೆಸಿಕೊಂಡಿದ್ದ. ಗೆಳೆಯರಿಬ್ಬರು ಹೊಸವರ್ಷದ ಪಾರ್ಟಿ ಮುಗಿಸಿಕೊಂಡು ತಡರಾತ್ರಿ ಬೆಳ್ಳೂರು ಕ್ರಾಸ್ ಕಡೆಯಿಂದ ನಾಗಮಂಗಲಕ್ಕೆ ಆಗಮಿಸುತ್ತಿದ್ರು.
Advertisement
Advertisement
ಈ ವೇಳೆ ಚೌಡೇನಹಳ್ಳಿ ಸಮೀಪ ಚೆಕ್‍ಪೋಸ್ಟ್ ಬಳಿ ಹಾಕಿದ್ದ ಬ್ಯಾರಿಕೇಡ್‍ಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಗೆಳೆಯರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರೂ ಯುವಕರು ನಾಗಮಂಗಲ ಪಟ್ಟಣದ ನಿವಾಸಿಗಳಾಗಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
Advertisement
ಘಟನೆ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.