ಸೂರತ್: 2 ವರ್ಷದ ಮಗುವಿನ ತಲೆ ಪ್ರೆಶರ್ ಕುಕ್ಕರ್ ನಲ್ಲಿ ಸಿಲುಕಿದ್ದು, 12 ಗಂಟೆಗಳ ಬಳಿಕ ಮಗುವಿನ ತಲೆಯನ್ನ ಸುರಕ್ಷಿತವಾಗಿ ಹೊರತೆಗೆದ ಘಟನೆ ಗುಜರಾತ್‍ನ ಸೂರತ್‍ನಲ್ಲಿರುವ ಪಂದೇಸಾರಾದಲ್ಲಿ ನಡೆದಿದೆ.
ಪರಿ(2) ಪ್ರೆಶರ್ ಕುಕ್ಕರ್ ನಲ್ಲಿ ತಲೆ ಸಿಲುಕಿಸಿಕೊಂಡಿದ್ದ ಮಗು. ಪರಿ ಅಡುಗೆಮನೆಯಲ್ಲಿ ಪಾತ್ರೆಗಳ ಜೊತೆ ಆಟವಾಡುತ್ತಿದ್ದ ವೇಳೆ ಅಕಸ್ಮಿಕವಾಗಿ ಆಕೆಯ ತಲೆ ಕುಕ್ಕರ್ ನಲ್ಲಿ ಸಿಲುಕಿಕೊಂಡಿತ್ತು. ಮಗುವಿನ ತಲೆ ಕುಕ್ಕರ್ ನಲ್ಲಿ ಸಿಲುಕಿದ ತಕ್ಷಣ ಜೋರಾಗಿ ಕಿರುಚಿ ಅಳುತ್ತಿದ್ದಳು. ಇದನ್ನು ಕೇಳಿದ ಪರಿ ಪೋಷಕರು ಓಡಿ ಬಂದು ಕುಕ್ಕರ್ ತೆಗೆಯಲು ಪ್ರಯತ್ನಿಸಿದ್ದಾರೆ.
Advertisement
Advertisement
ಕುಕ್ಕರ್ ತೆಗೆಯುವಲ್ಲಿ ಪರಿ ತಂದೆ ಅಶುತೋಷ್ ವಿಫಲವಾಗಿದ್ದು, ನಂತರ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಕುಕ್ಕರ್ ತೆಗೆಯಲು 4 ಗಂಟೆಗಳ ಕಾಲ ಪ್ರಯತ್ನಿಸಿದ್ದಾರೆ. ಆದರೆ ಅವರಿಂದಲೂ ಮಗುವಿನ ತಲೆಯಿಂದ ಕುಕ್ಕರ್ ತೆಗೆಯಲು ಸಾಧ್ಯವಾಗಲಿಲ್ಲ.
Advertisement
ಕೊನೆಗೆ ಕಮ್ಮಾರ ಮಾತ್ರ ಈ ಕುಕ್ಕರ್ ತೆಗೆಯಲು ಸಾಧ್ಯ ಎಂದು ವೈದ್ಯರು ಅಶುತೋಷ್‍ಗೆ ತಿಳಿಸಿದ್ದರು. ನಂತರ ಮಗುವಿನ ಪೋಷಕರು ಕಮ್ಮಾರನ ಹತ್ತಿರ ಹೋಗಿದ್ದಾರೆ. ಅಲ್ಲಿ ಕಮ್ಮಾರ ಕುಕ್ಕರ್ ಕಟ್ ಮಾಡಿ ಸಿಲುಕಿಕೊಂಡಿದ ಮಗುವಿನ ತಲೆಯನ್ನು 12 ಗಂಟೆಗಳ ಬಳಿಕ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.