ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಪುಟ್ಟಪೋರಿ ತನ್ನ ವಯಸ್ಸಿಗೆ ಮೀರಿದ ಸಾಧನೆ ಮಾಡಿದ್ದಾಳೆ. ಎರಡೇ ವರ್ಷಕ್ಕೆ ಇಡೀ ಜಗತ್ತನ್ನು ಗೆದ್ದು ಬಿಗಿದ್ದಾಳೆ. ತನ್ನ ಬುದ್ಧಿ ಸಾಮಾರ್ಥ್ಯದಿಂದಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿ ಇಡೀ ಭಾರತದ ಗಮನ ಸೆಳೆದಿದ್ದಾಳೆ.
ಮೈಸೂರಿನ ಹಳ್ಳದಕೇರಿ ನಿವಾಸಿಯಾಗಿರುವ ಗಣೇಶ್ ಹಾಗೂ ನಯನ ದಂಪತಿಯ ಸುಪುತ್ರಿ ದ್ಯುತಿ ಯಾವ ಕಾರು? ಯಾವ ಟ್ರೈ ಆಂಗಲ್? ಯಾವ ಪ್ರಾಣಿ? ಯಾವ ದೇಶ? ಹೀಗೆ ಯಾವುದೇ ಪ್ರಶ್ನೆಗಳಿಗೆ ಥಟ್ ಅಂತ ಉತ್ತರಿಸುತ್ತಾಳೆ. ತನ್ನ ಎರಡನೇ ವಯಸ್ಸಿನಲ್ಲೇ ಈ ಪೋರಿ ಇಡೀ ಭಾರತವೇ ತಿರುಗಿ ನೋಡುವಂತ ಸಾಧನೆ ಮಾಡಿದ್ದಾಳೆ.
ದ್ಯುತಿ ಮಾಡಿರುವ ಸಾಧನೆ ನೋಡಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಈ ವರ್ಷದ `ಯೆಂಗೆಸ್ಟ್ ಟ್ಯಾಲೆಂಟೆಡ್ ಗರ್ಲ್’ ವಿಭಾಗದ ಪ್ರಶಸ್ತಿ ನೀಡಿ ಗೌರವಿಸಿದೆ. ಎರಡು ವರ್ಷದೊಳಗಿನ ಮಕ್ಕಳ ಬುದ್ಧಿ ಶಕ್ತಿಗಿಂತ ದ್ಯುತಿಯಲ್ಲಿನ ಬುದ್ಧಿ ಶಕ್ತಿ ಹೆಚ್ಚಿದೆ. ದ್ಯುತಿ ಎಲ್ಲ ಪ್ರಾಣಿಗಳ ಹೆಸರು, ವಾಹನಗಳ ಹೆಸರು, ದೇಶದ ಹೆಸರು ಹಾಗೂ ಪದ್ಯಗಳನ್ನು ಸರಾಗವಾಗಿ ಹೇಳುತ್ತಾಳೆ. ಅಲ್ಲದೆ ಎರಡರಿಂದ ಮೂರು ಕೆಜಿ ತೂಕವನ್ನು ಎತ್ತಿ ತನ್ನ ತೋಳ್ಬಲವನ್ನು ಪ್ರದರ್ಶಿಸಿದ್ದಾಳೆ.
ದ್ಯುತಿಯ ಈ ಟ್ಯಾಲೆಂಟ್ ಅನ್ನು ಗುರುತಿಸಿದ ತಂದೆ ಗಣೇಶ್ ಹಾಗೂ ತಾಯಿ ನಯನ ಮಗಳ ಚುರುಕುತನವನ್ನು ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಿದರು. ಇಂಡಿಯನ್ ಬುಕ್ ಆಫ್ ರೆಕಾರ್ಡ್‍ಗೆ ಅರ್ಜಿ ಸಲ್ಲಿಸಿ ವಿಡಿಯೋ ಮೂಲಕ ಮಗಳ ಚಟುವಟಿಕೆಗಳನ್ನು ಸಂಸ್ಥೆಗೆ ಕಳುಹಿಸಿದ್ದರು. ದ್ಯುತಿ ವಿಡಿಯೋ ನೋಡಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ತಜ್ಞರಿಂದ ಮಗುವಿನ ಬುದ್ಧಿ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಿ ದೃಢಿಕರಿಸಿಕೊಂಡಿತು. ನಂತರ ಈ ವರ್ಷದ ಬಂದಿದ್ದ ಟ್ಯಾಲೆಂಟೆಡ್ ಮಕ್ಕಳ ಪೈಕಿ ದ್ಯುತಿ ಅತಿ ಹೆಚ್ಚು ಬುದ್ಧಿವಂತೆ ಹಾಗೂ ಯೆಂಗೆಸ್ಟ್ ಟ್ಯಾಲೆಂಟ್ ಗರ್ಲ್ ಎಂದು ನಿರ್ಧಿರಿಸಿ ಮೈಸೂರಿಗೆ ಆಗಮಿಸಿ ಪ್ರಶಸ್ತಿ ನೀಡಿದ್ದಾರೆ. ಈ ಪ್ರಶಸ್ತಿ ದ್ಯುತಿ ಪೋಷಕರಲ್ಲಿ ಸಂತಸ ತಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews