ಗದಗ: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ (Boy) ಮೇಲೆ ಬೀದಿ ನಾಯಿ (Stray Dogs) ಮನಬಂದಂತೆ ದಾಳಿಮಾಡಿ ಗಾಯಗೊಳಿಸಿದ ಘಟನೆ ಜಿಲ್ಲೆಯ ಮುಂಡರಗಿ (Mundargi) ಪಟ್ಟಣದ ವಾರ್ಡ್ ನಂಬರ್ 20 ದರ್ಗಾ ಬಳಿ ನಡೆದಿದೆ.
ಎರಡೂವರೆ ವರ್ಷದ ರುದ್ರೇಶ್ ದೊಡ್ಡಕಾಳೆಯ ತಲೆ, ಮುಖ, ತುಟಿ ಕಚ್ಚಿ ಗಾಯಗೊಳಿಸಿದೆ. ನಾಯಿ ಕಚ್ಚಿದ್ದರಿಂದ ತುಟಿ ಹರಿದುಹೋಗಿದೆ. ಹಲ್ಲು ಮುರಿತವಾಗಿದೆ. ಬಾಲಕನ ಚಿರಾಟ, ನರಳಾಟ ನೋಡಿದ ಮನೆಯವರು ಓಡಿಬಂದು ಬಿಡಿಸುವಷ್ಟರಲ್ಲಿ ಸಾಕಷ್ಟು ಗಾಯಗೊಳಿಸಿತ್ತು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಎಸ್‌ಪಿ ಬಿಜೆಪಿಯ ಬಿ ಟೀಂ – ಆದಿತ್ಯ ಠಾಕ್ರೆ ಆಕ್ರೋಶ
Advertisement
Advertisement
ಈ ಬೀದಿ ನಾಯಿ ಹಾವಳಿಯಿಂದ ಸ್ಥಳಿಯರು ಬೇಸತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಸುಮಾರು ನಾಲ್ಕೈದು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸಿದ್ದಾರೆ.
Advertisement
ಗಾಯಾಳು ಬಾಲಕನಿಗೆ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕೇಳಿ ರೊಚ್ಚಿಗೆದ್ದ ಜನರು ಬಾಲಕನ ಮೇಲೆ ದಾಳಿ ಮಾಡಿದ ನಾಯಿಯನ್ನು ಅಟ್ಟಾಡಿಸಿ ಹೊಡೆದು ಕೊಂದು ಹಾಕಿದ್ದಾರೆ.
Advertisement
ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್ ಮಾಡಿರುವ ಕುರಿತು ಮಾಧ್ಯಮದಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಸ್ಥಳಿಯ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈಗ ಇತರೇ ಬೀದಿ ನಾಯಿಗಳ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪುರಸಭೆ ಸಿಬ್ಬಂದಿ, ಸ್ಥಳಿಯರು ಒಟ್ಟಾಗಿ ಬಲೆಯ ಮೂಲಕ ಬೀದಿ ನಾಯಿ ಹಿಡಿಯುತ್ತಿದ್ದಾರೆ.
ರವಿವಾರ ಮಧ್ಯಾಹ್ನದಿಂದ ನಾಯಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದು, ಇಂದು ಸುಮಾರು ಹತ್ತಾರು ಬೀದಿ ಕಾಯಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.