ವಾಷಿಂಗ್ಟನ್: 2 ವರ್ಷದ ಬಾಲಕ ಆಕಸ್ಮಿಕವಾಗಿ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ. ಪಾಲಕರ ನಿರ್ಲಕ್ಷ್ಯದಿಂದ ಮಕ್ಕಳ ಕೈಗೆ ಬಂದೂಕುಗಳು ಸಿಕ್ಕಿ ಇಲ್ಲಿಯವರೆಗೆ ಅದೆಷ್ಟೋ ಇಂತಹುದೇ ಘಟನೆಗಳು ನಡೆದಿವೆ.
ಘಟನೆ ನಡೆದ ಕೂಡಲೇ ತಂದೆ ರೆಗ್ಗಿ ಮಾಬ್ರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೂ ಅವರು ಅಲ್ಲಿ ಸಾವನ್ನಪ್ಪಿದ್ದಾರೆ. ಬಾಲಕ ತಂದೆ ಮೇಲೆ ಗುಂಡು ಹಾರಿಸಿದ ಸಂದರ್ಭ ಒಟ್ಟು ಐವರು ಕೋಣೆಯಲ್ಲಿದ್ದರು ಎಂಬುದು ತಿಳಿದುಬಂದಿದೆ.
Advertisement
Advertisement
ಮೇ 26 ರಂದು ಘಟನೆ ನಡೆದಿದ್ದು, ಮಗುವಿನ ತಾಯಿ ಮೇರಿ ಅಯಾಲಾ ತನ್ನ ಪತಿ ತನಗೆ ತಾನೇ ಗುಂಡು ಹಾರಿಸಿಕೊಂಡಿರುವುದಾಗಿ ತಿಳಿಸಿದ್ದಳು. ಆದರೆ ಬಳಿಕ ಅವರ 3 ಮಕ್ಕಳಲ್ಲಿ ಹಿರಿಯವನನ್ನು ಪೊಲೀಸರು ವಿಚಾರಿಸಿದಾಗ, ತನ್ನ 2 ವರ್ಷದ ತಮ್ಮ ಗುಂಡು ಹಾರಿಸಿರುವ ಬಗ್ಗೆ ತಿಳಿಸಿದ್ದಾನೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಪಾಕ್ ಭಯೋತ್ಪಾದಕನ ಎನ್‍ಕೌಂಟರ್
Advertisement
ಪೋಷಕರ ನಿರ್ಲಕ್ಷ್ಯದಿಂದಾಗಿ ಮಕ್ಕಳ ಕೈಗೆ ಬಂದೂಕು ಸಿಕ್ಕಿ, ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಬ್ರಿ ಬಂದೂಕು ಇಟ್ಟಿದ್ದ ಬ್ಯಾಗ್ ಅನ್ನು ನೆಲದ ಮೇಲೆ ಇಟ್ಟಿದ್ದು, ಅದನ್ನು ಬಾಲಕ ಕುತೂಹಲದಿಂದ ನೋಡಿದ್ದಾನೆ. ಈ ವೇಳೆ ಆತನಿಗೆ ಗನ್ ಸಿಕ್ಕಿದ್ದು, ಅಕಸ್ಮಾತ್ ಆಗಿ ತನ್ನ ತಂದೆಯ ಬೆನ್ನಿಗೆ ಶೂಟ್ ಮಾಡಿದ್ದಾನೆ.
Advertisement
ಘಟನೆಯ ಸಂದರ್ಭ 5 ತಿಂಗಳ ಹೆಣ್ಣು ಮಗು, ಸೇರಿದಂತೆ ಕುಟುಂಬದ 5 ಸದಸ್ಯರೂ ಒಂದೇ ಕೊಣೆಯಲ್ಲಿದ್ದರು. ಮಾದಕ ದ್ರವ್ಯ ಸೇವನೆ ಹಾಗೂ ಇತರ ಆರೋಪದಲ್ಲಿ ಪೋಷಕರ ಮೇಲೆ ಕೇಸ್‌ಗಳಿದ್ದು, ಪೆರೋಲ್ ಮೇಲೆ ಹೊರಗಿದ್ದರು.
ಇದೀಗ 3 ಪುಟ್ಟ ಮಕ್ಕಳು ಪೋಷಕರಿಲ್ಲದೇ ಇರಬೇಕಾಗಿರುವ ಸಂದರ್ಭ ಎದುರಾಗಿದೆ. ಮಕ್ಕಳ ತಂದೆ ಗುಂಡು ತಗುಲಿ ಮೃತಪಟ್ಟರೆ, ತಾಯಿ ಮತ್ತೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಇದನ್ನೂ ಓದಿ: ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ಇತ್ತೀಚೆಗೆ ಅಮೆರಿಕದಲ್ಲಿ ಜನರಿಗೆ ಬೇಕಾಬಿಟ್ಟಿ ಬಂದೂಕುಗಳನ್ನು ಇರಿಸಲು ಅನುಮತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕದ ಸುಪರ್‌ಮಾರ್ಕೆಟ್, ಆಸ್ಪತ್ರೆ ಹಾಗೂ ಶಾಲೆಗಳಲ್ಲಿ ಗುಂಡಿನ ದಾಳಿಗಳು ನಡೆದಿದ್ದು, ಇದರ ನಡುವೆಯೇ ಮಕ್ಕಳ ಕೈಗೆ ಗನ್ ಸಿಗುವ ಬಗ್ಗೆ ಎಚ್ಚರ ವಹಿಸಬೇಕಿದೆ.