ಚೆನ್ನೈ: (Chennai) ಇಲ್ಲಿನ ಐಟಿ ಕಾರಿಡಾರ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಇಬ್ಬರು ಮಹಿಳಾ ಸಾಫ್ಟ್‌ವೇರ್ ಉದ್ಯೋಗಿಗಳು (Women Techies) ದಾರುಣ ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರಿನ 23 ವರ್ಷದ ಎಸ್.ಲಾವಣ್ಯ ಮತ್ತು ಕೇರಳದ ಪಾಲಕ್ಕಾಡ್‌ನ ಆರ್.ಲಕ್ಷ್ಮಿ ಇಬ್ಬರೂ ಎಚ್‌ಸಿಎಲ್ ಸ್ಟೇಟ್ ಸ್ಟ್ರೀಟ್ ಸರ್ವೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ 11:30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ವೇಳೆ ಹೊಂಡಾ ಸಿಟಿ ವಾಹನ ಡಿಕ್ಕಿ ಹೊಡೆದಿದೆ. ಚಾಲಕ ಮೋತಿಶ್ ಕುಮಾರ್‌ನನ್ನು (20) ಬಂಧಿಸಲಾಗಿದೆ. ಇದನ್ನೂ ಓದಿ: ಲಿಂಪಿ ವೈರಸ್ ಕಾಟ: ಹಾಲಿನ ಸಂಗ್ರಹ ಕುಸಿತ – ಸಿಹಿ ತಿಂಡಿಗಳ ಬೆಲೆ ದಿಢೀರ್ ಏರಿಕೆ
ಕುಮಾರ್ ಹೋಂಡಾ ಸಿಟಿಯನ್ನು ಅತಿ ವೇಗದಲ್ಲಿ ಚಲಾಯಿಸುತ್ತಿದ್ದ. ಕಾರು (Car accident) ಗಂಟೆಗೆ ಸುಮಾರು 130 ಕಿಮೀ ವೇಗದಲ್ಲಿ ಓಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತದೇಹಗಳನ್ನು ಕುಟುಂಬಗಳಿಗೆ ತಲುಪಿಸಲು ಪೊಲೀಸ್ ಆಯುಕ್ತರು ಸರ್ಕಾರದ ವೆಚ್ಚದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ – ಇಂಡಿಗೋ ಏರ್‌ಲೈನ್ಸ್‌ನ ಇಬ್ಬರು ಉದ್ಯೋಗಿಗಳು ಅರೆಸ್ಟ್