– ಉದ್ಯೋಗ ಆಕಾಂಕ್ಷೆ ಹೊಂದಿದ್ದ ಯುವತಿಯರ ಬದುಕು ದುರಂತ ಅಂತ್ಯ
ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ (Car Crash) ತೆಲಂಗಾಣ ಮೂಲದ (Telangana) ಇಬ್ಬರು ಯುವತಿಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿಯರನ್ನ ಗಾರ್ಲಾ ಮಂಡಲದ ನಿವಾಸಿ ಪುಲ್ಲಖಂಡಂ ಮೇಘನಾ ರಾಣಿ (25) ಮತ್ತು ಮಹಾಬುಬಾಬಾದ್ ಜಿಲ್ಲೆಯ ಮುಲ್ಕನೂರು ಗ್ರಾಮದ ಕಡಿಯಾಲ ಭಾವನಾ (24) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸಶಸ್ತ್ರ ಪಡೆಗಳ ಸಾಮರ್ಥ್ಯ ಬಲಪಡಿಸಲು ಮುಂದಾದ ಸರ್ಕಾರ – 79,000 ಕೋಟಿ ಮೌಲ್ಯದ ಪ್ರಸ್ತಾವನೆಗೆ ಅಸ್ತು
ಇಬ್ಬರೂ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಮೂರು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಸದ್ಯದಲ್ಲೇ ತಮ್ಮ ವ್ಯಾಸಂಗ ಮುಗಿಯುತ್ತಿದ್ದು, ಉದ್ಯೋಗ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದರು. ಆದ್ರೆ ಅಪಘಾತ ಇಬ್ಬರ ಜೀವ ಕಸಿದಿದ್ದು, ಬದುಕು ದುರಂತ ಅಂತ್ಯ ಕಂಡಿದೆ. ಇದನ್ನೂ ಓದಿ: ನಾಯಿ ಕಚ್ಚಿದ್ದ ಎಮ್ಮೆಯ ಹಾಲು ಬಳಸಿ `ರಾಯ್ತಾ’ ತಯಾರಿ – ಸೇವಿಸಿದ್ದ 200 ಜನಕ್ಕೆ ರೇಬೀಸ್ ಲಸಿಕೆ
ಕ್ಯಾಲಿಫೋರ್ನಿಯಾದ ಅಲಬಾಮಾ ಬೆಟ್ಟಗುಟ್ಟ ಬಳಿಯಿರುವ ದುರ್ಗಮ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಕಾರು ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ರಸ್ತೆಯಿಂದಾಚೆಗೆ ಉರುಳಿ ಆಳವಾದ ಕಂದಕಕ್ಕೆ ಬಿದ್ದಿದೆ ಎಂದು ವರದಿಗಳು ತಿಳಿಸಿವೆ.
ಮೇಘನಾ ಮತ್ತು ಭಾವನಾ ಇಬ್ಬರೂ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರು, ಇನ್ನೇನು ವಿದ್ಯಾಭ್ಯಾಸ ಮುಗಿಯುವ ಹಂತಕ್ಕೆ ಬಂದಿತ್ತು. ಹಾಗಾಗಿ ಉದ್ಯೋಗಾವಕಾಶ ಹುಡುಕಾಟದಲ್ಲಿದ್ದರು. ಇದನ್ನೂ ಓದಿ: 5ನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನ – ಏಕೈಕ ಮಹಿಳಾ ಅಧಿಕಾರಿಯಾಗಿ ಕರ್ನಾಟಕ ಪ್ರತಿನಿಧಿಸಿದ ಶಾಲಿನಿ ರಜನೀಶ್
ಸರ್ಕಾರದ ಸಹಾಯ ಕೇಳಿದ ಕುಟುಂಬ
ಸದ್ಯ ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಎರಡೂ ಕುಟುಂಬಗಳು ತೆಲಂಗಾಣ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯಕ್ಕೆ ತುರ್ತು ಸಹಾಯಕ್ಕೆ ಮನವಿ ಮಾಡಿವೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಪಾರ್ಥೀವ ಶರೀರ ತರಿಸಲು ಸಹಕರಿಸುವಂತೆ ಕೋರಿದ್ದಾರೆ. ಸದ್ಯ ಕ್ಯಾಲಿಫೋರ್ನಿಯಾದ ಸ್ಥಳೀಯ ಅಧಿಕಾರಿಗಳು ಪ್ರಸ್ತುತ ಅಪಘಾತದ ನಿಖರ ಕಾರಣವನ್ನ ಪರಿಶೀಲಿಸುತ್ತಿದ್ದಾರೆ.


