ಬೆಂಗಳೂರು: ಬಿಬಿಎಂಪಿ (BBMP Garbage Truck) ಕಸದ ಲಾರಿಗೆ ಇಬ್ಬರು ಮಹಿಳೆಯರು ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಗೋವಿಂದಪುರ ನಿವಾಸಿಗಳಾದ ನಾಜಿಯಾ ಸುಲ್ತಾನ್, ನಾಜಿಯಾ ಇರ್ಫಾನ್ ಮೃತ ಮಹಿಳೆಯರು. ಇದನ್ನೂ ಓದಿ: 1 ವಾರದೊಳಗೆ ತೆರವು ಮಾಡಿ: ನಿರ್ಮಾಣ ಹಂತದ ಅನಧಿಕೃತ ಕಟ್ಟಡಗಳಿಗೆ ಬ್ಯಾನರ್ ಹಾಕಿ BBMP ನೋಟಿಸ್
ಧಣಿಸಂದ್ರ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಚಾಲಕ ಲಾರಿ ಹತ್ತಿಸಿದ್ದಾನೆ.
ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ. ಲಾರಿ ಚಾಲಕನನ್ನು ಹೆಣ್ಣೂರು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ದಟ್ಟ ಮಂಜು – ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಸಾಧ್ಯತೆ