ಹೈದ್ರಾಬಾದ್: ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿದು, ಮಣ್ಣಿನಡಿ ಸಿಲುಕಿ ಇಬ್ಬರು ಮಹಿಳೆಯರು ಜೀವಂತ ಸಮಾಧಿಯಾದ ಘಟನೆ ಸೋಮವಾರ ಹೈದ್ರಾಬಾದ್‍ನ ಕೊಂಡಪುರ ಪ್ರದೇಶದಲ್ಲಿ ನಡೆದಿದೆ.
ಸೆಲ್ಲರ್ ನಿರ್ಮಿಸುವ ಸಲುವಾಗಿ ಕಾರ್ಮಿಕರು ಸುಮಾರು 40 ಅಡಿ ಆಳದ ಗುಂಡಿ ತೆಗೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಟ್ಟಡ ನಿರ್ಮಾಣಕ್ಕೆ ಹಾಕಲಾಗಿದ್ದ ರಾಡ್‍ಗಳ ಭಾರಕ್ಕೆ ಮಣ್ಣು ಕುಸಿದಿದ್ದು ಮಹಿಳೆಯರು ಸಾವನ್ನಪ್ಪಿದ್ದಾರೆ.
Advertisement
ಮೃತ ಮಹಿಳೆಯರನ್ನು ಭರತಮ್ಮ ಹಾಗೂ ಕಿಸ್ತಮ್ಮ ಎಂದು ಗುರುತಿಸಲಾಗಿದ್ದು, 2 ಗಂಟೆಗಳ ಕಾರ್ಯಾಚರಣೆ ಬಳಿಕ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ಘಟನೆಯಲ್ಲಿ ಮೃತ ಮಹಿಳೆಯರ ಗಂಡಂದಿರಾದ ಬಲರಾಜು ಹಾಗೂ ಪಾಪಯ್ಯ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿರಲಿಲ್ಲ ಹಾಗೂ ಸುರಕ್ಷಾ ಕ್ರಮಗಳನ್ನ ಕೈಗೊಂಡಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
Advertisement
ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಆರೋಪದಡಿ ಸೈಟ್ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಾಗಿದೆ.