ಮಡಿಕೇರಿ: ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವನಪ್ಪಿದ್ದು, ಮತ್ತೊಂದು ಆನೆ ತನ್ನ ಸಂಗಡಿಗರ ಸಾವಿನಿಂದ ಕೆಂಗೆಟ್ಟು ಘೀಳಿಡುತ್ತಿದೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದ ತೋಟವೂಂದರಲ್ಲಿ ಬೈನೆ ಮರ ತಿನ್ನಲು ಬಂದು ವಿದ್ಯುತ್ ತಂತಿ ತಲುಗಿ ಸಾವನ್ನಪ್ಪಿದೆ. ಆನೆಗಳು ಗ್ರಾಮದ ಪಾಳುಬಿದ್ದ ತೋಟವೊಂದಕ್ಕೆ ಬಂದು ಬೈನೆಮರದ ಎಲೆಯನ್ನು ತಿನ್ನಲು ಮರವನ್ನು ಬೀಳಿಸಿವೆ. ಮರ ನೇರವಾಗಿ ವಿದ್ಯುತ್ ತಂತಿಗಳ ಮೇಲೆಯೇ ಬಿದ್ದಿದ್ದರಿಂದ ವಯರ್‍ಗಳು ತುಂಡಾಗಿ ನೆಲಕ್ಕೆ ಬಿದ್ದಿವೆ. ಈ ವೇಳೆ ಸ್ಥಳದಲ್ಲಿದ್ದ ಆನೆಗಳು ತಂತಿಯನ್ನು ತುಳಿದಿದ್ದರಿಂದ ಸಾವನ್ನಪ್ಪಿವೆ ಎಂದು ಕೆಇಬಿ ಸಹಾಯಕ ಇಂಜಿನೀಯರ್ ಸುರೇಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಆಹಾರಕ್ಕಾಗಿ ಒಟ್ಟು ನಾಲ್ಕು ಆನೆಗಳು ಬಂದಿದ್ದು, ಅವುಗಳಲ್ಲಿ ಎರಡು ಸಾವನ್ನಪ್ಪಿವೆ. ಒಂದು ಆನೆ ಸಂಗಡಿಗರ ಸಾವಿನಿಂದ ಘೀಳಿಡುವ ದೃಶ್ಯ ಮನಕಕುವಂತಿತ್ತು. ಮರಣೋತ್ತರ ಪರೀಕ್ಷೆಯ ನಂತರ ಆನೆಗಳ ಮೃತದೇಹವನ್ನು ಸ್ಥಳಾಂತರಿಸಲಾಗುತ್ತದೆ ಎಂದು ಅರಣ್ಯ ಅಧಿಕಾರಿ ಗೋಪಾಲ್ ತಿಳಿಸಿದ್ದಾರೆ.
https://www.youtube.com/watch?v=pDw2yyYgAHI