ಮುಂಬೈ: ಭಾರತೀಯ ನೌಕಾಪಡೆಗೆ (Indian Navy) ಮೂರು ಹೊಸ ಅಸ್ತ್ರ ಸೇರ್ಪಡೆಯಾಗಿವೆ. ಸ್ವದೇಶಿ ನಿರ್ಮಿತ ಯುದ್ಧನೌಕೆಗಳಾದ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗುರಿ ಮತ್ತು ಜಲಾಂತರ್ಗಾಮಿ ಐಎನ್‌ಎಸ್ ವಾಘ್‌ಷೀರ್ (Vaghsheer) ಇಂದು ದೇಶಸೇವೆಗೆ ಅರ್ಪಣೆಗೊಂಡಿವೆ.
15 January 2025
A Historic Occasion – Commissioning of Surat, Nilgiri and Vaghsheer.
The landmark ceremony will be Presided over by the Hon’ble Prime Minister @narendramodi@PMOIndia#AatmanirbharBharat#IndianNavy#CombatReady #Credible #Cohesive & #FutureReady Force pic.twitter.com/pkxJGVursz
— SpokespersonNavy (@indiannavy) January 14, 2025
Advertisement
ಮುಂಬೈನ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (Narendra Modi) ಇವುಗಳನ್ನು ಸೇನೆಗೆ ಹಸ್ತಾಂತರಿಸಿದರು. ನೆಟ್‌ವರ್ಕ್ ಸೆಂಟ್ರಿಕ್ ಸಾಮರ್ಥ್ಯದ ಐಎನ್‌ಎಸ್ ಸೂರತ್, ಜಗತ್ತಿನಲ್ಲೇ ದೊಡ್ಡ, ಅತ್ಯಾಧುನಿಕ ಡೆಸ್ಟ್ರಾಯರ್ ಯುದ್ಧನೌಕೆಗಳಲ್ಲಿ ಒಂದಾಗಿದೆ. ಐಎನ್‌ಎಸ್ ನೀಲಗಿರಿ.. ಸ್ಟೆಲ್ತ್ ಫ್ರಿಗೆಟ್ ಪ್ರಾಜೆಕ್ಟ್‌ನ ಮೊದಲ ಯುದ್ಧ ನೌಕೆಯಾಗಿದೆ.
Advertisement
ಇನ್ನೂ ಐಎನ್‌ಎಸ್ ವಾಘ್‌ಷೀರ್‌ನ್ನು ಫ್ರಾನ್ಸ್‌ನ ನೇವಲ್ ಗ್ರೂಪ್ ಸಹಕಾರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅತ್ತ, ಫ್ರಾನ್ಸ್‌ಗೆ ಸೇರಿದ ಅಣು ಜಲಾಂತರ್ಗಾಮಿ ನೆಲೆಗಳ ದತ್ತಾಂಶ ಸೋರಿಕೆ ಆಗಿರೋದು ಭಾರೀ ಕಳವಳಕ್ಕೆ ಕಾರಣವಾಗಿದೆ. ಈ ಸಬ್‌ಮೆರಿನ್ ರಷ್ಯಾ ಸನಿಹಕ್ಕೆ ಗಸ್ತಿಗೆ ಹೋಗಬೇಕಿತ್ತು. ಈ ದತ್ತಾಂಶ ಮಾಸ್ಕೋ ಕೈ ಸೇರಿದ್ರೆ, ಅಣು ಜಲಾಂತರ್ಗಾಮಿಯ ಪರಿಸ್ಥಿತಿ ಏನಾಗಬೇಡ ಎಂದು ಫ್ರಾನ್ಸ್ ಆತಂಕಗೊಂಡಿದೆ.
Advertisement
Advertisement
ಚೀನಾಗೆ ಪ್ರತ್ಯುತ್ತರ:
ಸದ್ಯ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಈ ಮೂರು ಅಸ್ತ್ರಗಳು ಚೀನಾಕ್ಕೆ ಪ್ರತ್ಯತ್ತರ ನೀಡಿದೆ ಎನ್ನಲಾಗುತ್ತಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಚೀನಾ ಒಟ್ಟು 148 ಯುದ್ಧ ನೌಕೆಗಳನ್ನು ಸೇನೆಗೆ ಸೇರ್ಪಡೆ ಮಾಡಿದೆ. ಅಲ್ಲದೇ ಪಾಕಿಸ್ತಾನ ಚೀನಾ ಸಹಾಯದಿಂದ 50 ಹಡುಗಳನ್ನು ನಿರ್ಮಿಸಲು ಮುಂದಾಗಿದೆ. ಈ ಬೆಳವಣಿಗೆಯ ನಡುವೆ ಭಾರತ 2 ಯುದ್ಧನೌಕೆ ಹಾಗೂ ಒಂದು ಜಲಾಂತರ್ಗಾಮಿ ಸೇನೆಗೆ ಸೇರ್ಪಡೆಗೊಳಿಸಿದೆ.