ಕತ್ರಾ/ಜಮ್ಮು: ಜಮ್ಮು (Jammu) ಮತ್ತು ಕಾಶ್ಮೀರದಲ್ಲಿ (Kashmir) ಭೂಕುಸಿತ ಸಂಭವಿಸಿದ್ದು, ಇಬ್ಬರು ವೈಷ್ಣೋದೇವಿ (Vaishnodevi) ಯಾತ್ರಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿನ ರಿಯಾಸಿ (Reasi) ಜಿಲ್ಲೆಯ ವೈಷ್ಣೋದೇವಿ ದೇಗುಲದ ಹೊಸ ಟ್ರ್ಯಾಕ್ ನಲ್ಲಿ ಈ ಘಟನೆ ಸಂಭವಿಸಿದ್ದು, ಇಬ್ಬರು ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
ಭವನದಿಂದ ಮೂರು ಕಿಮೀ ದೂರದಲ್ಲಿ ಮಧ್ಯಾಹ್ನ 2:30 ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಓವರ್‌ಹೆಡ್ ಟ್ಯಾಂಕ್‌ನ ಕಬ್ಬಿಣದ ರಚನೆಯ ಒಂದು ಭಾಗ ಹಾನಿಯಾಗಿದ್ದು, ಅದರ ಕೆಳಗೆ ಯಾತ್ರಿಕರು ಸಿಲುಕಿಕೊಂಡಿದ್ದರು ಎಂದು ಹೇಳಿದರು.
ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಓರ್ವ ಬಾಲಕಿಗೆ ತೀವ್ರ ಗಾಯಗಳಾಗಿವೆ ಎಂದು ರಿಯಾಸಿಯ ಉಪ ಆಯುಕ್ತ ವಿಶೇಷ್ ಪೌಲ್ ಮಹಾಜನ್ ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: MUDA Scam | ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ರಿಲೀಫ್ – ಸೆ.9ಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆ!
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನಾಗರೀಕ ಆಡಳಿತ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಟ್ರ್ಯಾಕಿನಿಂದ ಯಾತ್ರಿಕರ ಯಾತ್ರೆ ಸ್ಥಗಿತಗೊಳಿಸಿದ ಕೂಡಲೇ ರಕ್ಷಣಾ ಕಾರ್ಯ ಪ್ರಾರಂಭಿಸಲಾಗಿದೆ. ಘಟನೆಯ ಬಗ್ಗೆ ಸದ್ಯದಲ್ಲೇ ಹೆಚ್ಚಿನ ವಿವರಗಳನ್ನು ತಿಳಿಸುತ್ತೇವೆ ಎಂದು ಹೇಳಿದ್ದಾರೆ.
2022ರ ಹೊಸ ವರ್ಷದಲ್ಲಿ ಇದೇ ದೇಗುಲದಲ್ಲಿ ಕಾಲ್ತುಳಿತ ಸಂಭವಿಸಿ 12 ಮಂದಿ ಸಾವನ್ನಪ್ಪಿದ್ದು 16 ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸರ್ವಿಸ್ ರಸ್ತೆಗೆ ಉರುಳಿದ ಕಾರು