ಶ್ರೀನಗರ: ಆಳವಾದ ಬಿರುಕಿನ ಮಧ್ಯೆ ಬಿದ್ದು ಇಬ್ಬರು ಚಾರಣಿಗರು ದಾರುಣವಾಗಿ ಮೃತಪಟ್ಟ ಘಟನೆ ಜಮ್ಮುಕಾಶ್ಮಿರದ ಕಾಲೋಹಾಯ್ ಗ್ಲೇಸಿಯರ್ ನಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ನವೀದ್ ಜೀಲಾನಿ ಹಾಗೂ ಆದಿಲ್ ಶಾ ಎಂದು ಗುರುತಿಸಲಾಗಿದೆ. ನವೀದ್ ಜಮ್ಮು ಕಾಶ್ಮೀರದ ಅಬಕಾರಿ ಹಾಗೂ ಆದಾಯ ತೆರಿಗೆ ಅಧಿಕಾರಿಯಾಗಿದ್ದಾರೆ. ಆದಿಲ್ ಆಲ್‍ಫೈನ್ ಗ್ರೂಪ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ತಂಡ ಜಮ್ಮುಕಾಶ್ಮಿರಕ್ಕೆ ಪ್ರವಾಸಕ್ಕೆಂದು ತೆರಳಿತ್ತು.
ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ. ಅಲ್ಲದೇ ವಾಯುಪಡೆ ಹಾಗೂ ಸೈನಿಕರನ್ನು ಕೂಡ ಸರ್ಕಾರ ಕಳುಹಿಸಲಾಗಿದೆ. 10 ಮಂದಿ ಚಾರಣಿಗರು ಕಾಲೋಹಾಯ್ ನಿಂದ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಆಳವಾದ ಬಿರುಕು ಕಾಣದೆ ಮೂವರು ಅದರೊಳಗೆ ಬಿದ್ದಿದ್ದಾರೆ. ಇದರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅಂತ ಅವರು ಹೇಳಿದ್ದಾರೆ.
ಮಾಹಿತಿ ತಿಳದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಅಲ್ಲದೇ ಇಂದು ಬೆಳಗ್ಗೆ ಏರ್ ಫೋರ್ಸ್ ಕೂಡ ಇಂದು ಬೆಳಗ್ಗೆ ದೌಡಾಯಿಸಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಕಾಲೋಹಾಯ್ 5ಕಿಮೀ ವರೆಗೆ ಮಂಜು ಆವರಿಸಿರುವ ಪ್ರದೇಶವಾಗಿದ್ದು, ಇದು ಚಾರಣಿಗರ ಸ್ಪಾಟ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


