ಕೀವ್: ಇಬ್ಬರು ಉನ್ನತ ಅಧಿಕಾರಿಗಳನ್ನು ತನಿಖೆಗಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮಾನತುಗೊಳಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ ಮೂರು ತಿಂಗಳಿಂದ ಭೀಕರವಾಗಿ ಯುದ್ಧ ನಡೆಯುತ್ತಿದೆ. ಈ ವೇಳೆ ತಮ್ಮ ದೇಶದಲ್ಲಿಯೇ ಇದ್ದು, ರಷ್ಯಾಗೆ ಸಹಾಯ ಮಾಡುತ್ತಿದ್ದ ಅಧಿಕಾರಗಳ ವಿರುದ್ಧ ಝೆಲೆನ್ಸ್ಕಿ ಅವರು ಕ್ರಮ ತೆಗೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಅಧ್ಯಕ್ಷೀಯ ಕಚೇರಿಯ ಉಪ ಮುಖ್ಯಸ್ಥ ಆಂಡ್ರಿ ಸ್ಮಿರ್ನೋವ್ ಅವರನ್ನು ಅಮಾನತು ಮಾಡಲಾಗಿದೆ. ಐರಿನಾ ವೆನೆಡಿಕ್ಟೋವಾ ಅವರನ್ನು ಸಹ ಪ್ರಾಸಿಕ್ಯೂಟರ್ ಜನರಲ್‍ನಿಂದ ತೆಗೆದುಹಾಕಲಾಗಿದೆ. ಇವರು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸುಳಿವು ನಮಗೆ ಸಿಕ್ಕಿದೆ. ಈ ಕುರಿತು ಸಂಪೂರ್ಣವಾಗಿ ತನಿಖೆಯಾಗುವವರೆಗೂ ಅವರನ್ನು ಅಮಾನತು ಮಾಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಒತ್ತಾಯ – ತನಿಖೆಗೆ ಆದೇಶ
- Advertisement3
ಅಧ್ಯಕ್ಷರ ಹಿರಿಯ ಸಹಾಯಕ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಧ್ಯಕ್ಷೀಯ ಕಚೇರಿಯ ಉಪ ಮುಖ್ಯಸ್ಥ ಆಂಡ್ರಿ ಸ್ಮಿರ್ನೋವ್, ವೆನೆಡಿಕ್ಟೋವಾ ಅವರನ್ನು ಅಮಾನತುಗೊಳಿಸಲಾಗಿದೆ. ಬಕಾನೋವ್ ಅವರನ್ನು ತಮ್ಮ ಕರ್ತವ್ಯಗಳನ್ನು ಪೂರೈಸುವುದರಿಂದ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಆದರೆ ವಜಾಗೊಳಿಸಲಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
- Advertisement
ತನಿಖೆ ವೇಳೆ ಅವರನ್ನು ದೋಷಮುಕ್ತಗೊಳಿಸಿದರೆ ಇಬ್ಬರು ಅಧಿಕಾರಿಗಳು ತಮ್ಮ ಉದ್ಯೋಗಗಳಿಗೆ ಮರಳಬಹುದೇ ಎಂದು ಕೇಳಿದಾಗ, ನಾವು ಕಾನೂನು ಪಾಲಿಸುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಖಂಡಿತವಾಗಿ ಸಾಧ್ಯವಾಗುತ್ತೆ. ಈ ಬಗ್ಗೆ ನಾನು ಊಹಿಸಬಲ್ಲೆ ಎಂದು ಉತ್ತರಿಸಿದರು.