ಬೆಂಗಳೂರು: ಪ್ರಭಾವಿ ಸಚಿವರ ಹನಿಟ್ರ್ಯಾಪ್‌ಗೆ ಯತ್ನ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬಾಂಬ್ ಹಾಕಿದ್ದಾರೆ.
ಹನಿಟ್ರ್ಯಾಪ್ (Honeytrap) ಪ್ರಯತ್ನದ ಬಗ್ಗೆ ಖಚಿತಪಡಿಸಿದ ಸತೀಶ್ ಜಾರಕಿಹೊಳಿ, ಸಚಿವರ ಮೇಲೆ ಎರಡು ಸಲ ಹನಿ ಟ್ರ್ಯಾಪ್ ಆಗಿದೆ. ಅದನ್ನ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪಬ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ? – ಡಿಕೆಶಿ ಸುಳಿವು
ಸಂಬಂಧಪಟ್ಟ ಸಚಿವರಿಗೆ ದೂರು ಕೊಡಲು ಹೇಳಿದ್ದೀನಿ. ಇದಕ್ಕೆ ಕಡಿವಾಣ ಹಾಕಬೇಕು. ಇದರಲ್ಲಿ ನಮ್ಮವರು ಅಷ್ಟೇ ಅಲ್ಲ, ಬೇರೆ ಪಕ್ಷದ ನಾಯಕರು ಹನಿ ಟ್ರ್ಯಾಪ್ ನಲ್ಲಿ ಸಿಲುಕಿದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು, ಈ ವಿಚಾರವಾಗಿ ಸಿಎಂ ಮತ್ತು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ ಅಂತೇಳಿದ್ರು. ಇದನ್ನೂ ಓದಿ: ಮಾರ್ಚ್ 22ರ ಕರ್ನಾಟಕ ಬಂದ್‌ಗೆ ಸರ್ಕಾರದ ಬೆಂಬಲ ಇಲ್ಲ: ಡಿಕೆಶಿ
ಸಚಿವ ರಾಜಣ್ಣ ಬಾಂಬ್:
ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ, ಪೆನ್‌ಡ್ರೈವ್ ತಯಾರಾಗಿದೆ. ನನ್ನ ಮೇಲೂ ಹನಿಟ್ರ್ಯಾಪ್ (Honeytrap) ಯತ್ನ ನಡೆದಿದೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ (KN Rajanna) ಸ್ಫೋಟಕ ಮಾಹಿತಿ ನೀಡಿದರು. ಇದನ್ನೂ ಓದಿ: ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್ ರಾಜಣ್ಣ ಬಾಂಬ್
ವಿಧಾನಸಭೆಯಲ್ಲಿ (Vidhan Sabha) ಗುರುವಾರ ಮಾತನಾಡಿದ ಅವರು, ಇದರ ಬಗ್ಗೆ ದೂರು ಕೊಡುತ್ತೇನೆ. ಗೃಹ ಸಚಿವರು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು. ಬಜೆಟ್ ಭಾಷಣದ (Budget Speech) ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಯತ್ನಾಳ್, ರಾಜ್ಯದಲ್ಲಿ ಸಹಕಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಲಾಗಿದೆ. ಇದೊಂದು ಕೆಟ್ಟ ಸಂಸ್ಕೃತಿ. ಜನ ಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು. ಈ ಬೆನ್ನಲ್ಲೇ ಸತಿಶ್ ಜಾರಕಿಹೊಳಿ ಸಹ ಶಾಕಿಂಗ್ ಹೇಳಿಕೆ ನೀದರು.