ಉಡುಪಿ: ಕಳ್ಳತನ ಮಾಡಿದ್ದಕ್ಕೆ ಇಬ್ಬರು ಯುವಕರ ಪ್ಯಾಂಟ್ ಕಳಚಿ, ಚಡ್ಡಿಯಲ್ಲಿ ನಿಲ್ಲಿಸಿ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಗುರುವಾರ ನಡೆದಿದೆ.
ಇಂಡಸ್ಟ್ರಿಯಲ್ ಏರಿಯಾದ ಗ್ಯಾರೇಜ್‍ನಲ್ಲಿ ರಿಪೇರಿಗೆ ಬಂದಿದ್ದ ಕಾರಿನ ಮ್ಯೂಸಿಕ್ ಸಿಸ್ಟಂ, ಬೆಲೆಬಾಳುವ ಪಾರ್ಟ್‍ಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳರಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಇತ್ತೀಚೆಗೆ ಉಡುಪಿಯ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿನಲ್ಲಿರುವ ಬೆಲೆ ಬಾಳುವ ವಸ್ತುಗಳ ಕಳ್ಳತನ ಹೆಚ್ಚಾಗಿತ್ತು. ಮ್ಯೂಸಿಕ್ ಸಿಸ್ಟಂ, ಕಾರಿನ ಕ್ಯಾಮೆರಾಗಳು, ಸ್ಪೀಕರ್, ಪೆಟ್ರೋಲ್, ಕಾರಿನಲ್ಲಿದ್ದ ಹಣ, ಪರ್ಸ್ ಹೀಗೆ ಸಿಕ್ಕಿದ್ದೆಲ್ಲವನ್ನು ಕಳ್ಳರು ದೋಚಿ ಪರಾರಿಯಾಗುತ್ತಿದ್ದರು.
Advertisement
ಕಳೆದ ಎರಡು ದಿನದ ಹಿಂದೆ ಮಣಿಪಾಲದಲ್ಲಿ ಇಬ್ಬರು ಯುವಕರು ಕಳ್ಳತನ ಮಾಡುವಾಗ ಸ್ಥಳೀಯರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಕಳ್ಳರ ಕಾಟಕ್ಕೆ ಬೇಸತ್ತಿದ್ದ ಗ್ಯಾರೇಜ್ ಮಾಲೀಕರು ಹಾಗೂ ಸ್ಥಳೀಯರು ಸೇರಿ ಕಳ್ಳರಿಗೆ ಗೂಸಾ ಕೊಟ್ಟಿದ್ದಾರೆ. ನಂತರ ಕಳ್ಳರು ನಾವು ಕಾಲೇಜು ವಿದ್ಯಾರ್ಥಿಗಳು ಖರ್ಚಿಗೆ ಹಣ ಇಲ್ಲ ಅಂತ ಕಳ್ಳತನ ಮಾಡುತ್ತಿದ್ದೆವು ಎಂದು ಹೇಳಿದಾಗ, ಜನರು ಯುವಕರನ್ನು ಪೊಲೀಸರಿಗೆ ಒಪ್ಪಿಸದೆ ಬುದ್ದಿ ಹೇಳಿ ಬಿಟ್ಟು ಕಳುಹಿಸಿದ್ದಾರೆ.
Advertisement
ಹಲ್ಲೆ ನಡೆಸುತ್ತಿರುವ ವೀಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಈ ಸಾಮೂಹಿಕ ಹಲ್ಲೆ ಈಗ ಪೊಲೀಸರ ನಿದ್ದೆ ಕೆಡಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv