ಇಬ್ಬರು ಕಳ್ಳರನ್ನು ಬಂಧಿಸಿ 17 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದ ಪೊಲೀಸರು!

Public TV
1 Min Read
BLY Theft Arrested

ಬಳ್ಳಾರಿ: ಒಬ್ಬಂಟಿ ಮಹಿಳೆಯರ ಸರಗಳ್ಳತನ ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರನಾಕ್ ಕಳ್ಳರನ್ನು ನಗರದ ಕೌಲಬಜಾರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ಬಂಧಿತರಿಂದ ಬೆಳ್ಳಿ ಹಾಗೂ ಬಂಗಾರ ಸೇರಿದಂತೆ 17 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿ ತಾಲೂಕಿನ ಜಾನೆಕುಂಟೆ ತಾಂಡಾದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿನಾಯಕ್ (38) ಹಾಗೂ ಸಂಡೂರು ತಾಲೂಕಿನ ವೆಂಕಟಗಿರಿ ತಾಂಡಾದ ವೆಂಕಟೇಶ್ ನಾಯ್ಕ್ (43) ಬಂಧಿತ ಕಳ್ಳರು. ಆರೋಪಿಗಳ ವಿರುದ್ಧ ಬಳ್ಳಾರಿಯ ಕೌಲಬಜಾರ, ಕೊಪ್ಪಳದ ಕುಷ್ಟಗಿ, ಆಂಧ್ರಪ್ರದೇಶದ ಗುಂತಕಲ್ಲು, ಚಿಪ್ಪಗಿರಿ, ಹಿರೇಹಾಳ್ ಠಾಣೆಯಲ್ಲಿ ಒಟ್ಟು 17 ಕಳ್ಳತನ ದೂರುಗಳು ದಾಖಲಾಗಿವೆ.

BLY Theft Arrested 1

ಸೋಮವಾರ ಸಂಜೆ ಇಬ್ಬರೂ ಆರೋಪಿಗಳು ಕಳ್ಳತನ ಮಾಡಿದ ಆಭರಣಗಳನ್ನು ಮಾರಾಟ ಮಾಟಲು ನಗರಕ್ಕೆ ಬಂದಿದ್ದರು. ಖಚಿತ ಮಾಹಿತಿ ಆಧಾರ ಮೇಲೆ ಅವರನ್ನು ಬಳ್ಳಾರಿ ಹಳೇ ಬೈಪಾಸ್ ರಸ್ತೆಯ ಈದ್ಗಾ ಮೈದಾನದ ಬಳಿ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಬಂಧಿತರಿಂದ 486 ಗ್ರಾಂ ಬಂಗಾರ, 2.6 ಕೆ.ಜಿ ಬೆಳ್ಳಿ, ವಿವಿಧ ಕಂಪೆನಿಯ 3 ಲ್ಯಾಪ್‍ಟಾಪ್, ಎರಡು ಮೊಬೈಲ್, ಬೈಕ್ ಸೇರಿದಂತೆ ಒಟ್ಟು 17 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *