ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧರು ಹೊಡೆದುರುಳಿಸಿದ್ದಾರೆ.
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಾಶ್ಮೀರ ಪೊಲೀಸರು, ಅನಂತನಾಗ್‍ನ ಬಿಜ್‍ಬೆಹರಾ ಪ್ರದೇಶದ ಶಾದಿಪೋರಾದಲ್ಲಿ ಉಗ್ರರು ನೆಲೆಸಿರುವ ಖಚಿತ ಮಾಹಿತಿ ಮೇರೆಗೆ ಜಂಟಿ ದಾಳಿ ನಡೆಸಿದ ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಇದನ್ನೂ ಓದಿ: ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಡಿಯೋ ಹೊಂದಿರಬೇಕು: ದೆಹಲಿ ಹೈಕೋರ್ಟ್
Advertisement
#AnantnagEncounterUpdate: Killed #terrorists identified as Ishfaq Ah Ganie R/O Chakwangund, #Anantnag & Yawar Ayub Dar R/O Dogripora, #Awantipora, affiliated with proscribed #terror outfit HM. The duo were involved in several #terror crimes: IGP Kashmir@JmuKmrPolice https://t.co/ymypajOgQW
— Kashmir Zone Police (@KashmirPolice) May 28, 2022
Advertisement
ಇಬ್ಬರು ಉಗ್ರರರೊಂದಿಗೆ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಕ್ಕೆ ಪಡೆಯಲಾಗಿದೆ. ಪ್ರಸ್ತುತ ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಹತ್ಯೆ ಮಾಡಲಾದ ಇಬ್ಬರು ಉಗ್ರರನ್ನು ಇಶ್ಫಾಕ್ ಅಹ್ ಗನಿ, ಮತ್ತು ಯಾರ್ ಅಯೂಬ್ ದಾರ್ ಎಂದು ಗುರುತು ಪತ್ತೆ ಹಚ್ಚಲಾಗಿದೆ. ಇವರಿಬ್ಬರೂ ಈ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಜಮ್ಮು-ಕಾಶ್ಮೀರದ ಐಜಿಪಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಿಚಾರ ನಪುಂಸಕರು ಪಠ್ಯ ಪರಿಷ್ಕರಣಾ ವಿವಾದ ಸೃಷ್ಟಿಸಿ ಮೈಕಾಸುರರಾಗಿದ್ದಾರೆ: ಪ್ರತಾಪ್ ಸಿಂಹ
Advertisement