ಶ್ರೀನಗರ: ಜಮ್ಮು ಕಾಶ್ಮೀರದ ಟ್ರಾಲ್‍ನಲ್ಲಿ ಇಂದು ಬೆಳಿಗ್ಗೆ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ಶ್ರೀನಗರದಿಂದ 36 ಕಿ.ಮೀ ದೂರದಲ್ಲಿರುವ ಟ್ರಾಲ್‍ನ ಸಾತೋರಾ ಪ್ರದೇಶದಲ್ಲಿ ಎನ್‍ಕೌಂಟರ್ ನಡೆದಿದೆ. ಇಲ್ಲಿನ ಕಾಡುಪ್ರದೇಶದಲ್ಲಿ ಕನಿಷ್ಠ 4 ರಿಂದ 5 ಉಗ್ರರು ಅಡಗಿದ್ದರು ಎಂದು ವರದಿಯಾಗಿದೆ.
Advertisement
ಹತ್ಯೆಗೀಡಾದ ಉಗ್ರರ ಮೃತದೇಹಗಳನ್ನು ಇನ್ನೂ ತೆರವು ಮಾಡಿಲ್ಲ, ಆದ್ರೆ ಗುಂಡಿನ ದಾಳಿ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯ ನಡೆಸಲಾಗಿದೆ ಎಂದು ಹೇಳಿದ್ದಾರೆ.
Advertisement
ಶೋಧ ಕಾರ್ಯಕ್ಕೆ ತೆರಳಿದ್ದ ಭದ್ರತಾ ಪಡೆ ಮೇಲೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರಿಂದ ಅದು ಎನ್‍ಕೌಂಟರ್ ಆಗಿ ಮಾರ್ಪಾಡಾಯಿತು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಸೇನೆ, ಪೊಲೀಸರು ಹಾಗೂ ಸಿಆರ್‍ಪಿಎಫ್ ಪಡೆ ಒಟ್ಟಾಗಿ ಸೇರಿ ಕಾರ್ಯಾಚರಣೆ ನಡೆಸಿದ್ದಾರೆ.
Advertisement
ಕಾಶ್ಮೀರ ಕಣಿವೆಯಲ್ಲಿ ಕಳೆದ 7 ತಿಂಗಳಲ್ಲಿ ಒಟ್ಟು 102 ಉಗ್ರರನ್ನು ನಿರ್ನಾಮ ಮಾಡಲಾಗಿದೆ ಎಂದು ಶುಕ್ರವಾರದಂದು ಸುದ್ದಿಸಂಸ್ಥೆ ವರದಿ ಮಾಡಿತ್ತು. ಕಾಶ್ಮೀರದಲ್ಲಿರೋ ಸುಮಾರು 220 ಉಗ್ರರಲ್ಲಿ ಶೇ. 50ರಷ್ಟು ಉಗ್ರರು ಪಾಕಿಸ್ತಾನದವರು ಎಂದು ಗುರುವಾರದಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದರು. ಕಳೆದ 5 ತಿಂಗಳಲ್ಲಿ ಉಗ್ರರ ಒಳನುಸುಳುವಿಕೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದರು.
Advertisement
#UPDATE J&K: Two terrorists killed in an encounter with security forces in Satora area of Tral, operation underway.
— ANI (@ANI) July 15, 2017
#Visuals Two terrorists killed in an encounter with security forces in Satora area of Tral (J&K), operation underway. pic.twitter.com/ccQZg5N8Ct
— ANI (@ANI) July 15, 2017