– ಕಚೇರಿ ಒಳಗೆ ಸ್ಫೋಟಿಸಿಕೊಂಡ ಉಗ್ರ, ಮತ್ತೋರ್ವ ಪೊಲೀಸರ ಗುಂಡಿಗೆ ಬಲಿ
ಅಂಕಾರ: ಟರ್ಕಿಯ ರಾಜಧಾನಿ ಅಂಕಾರಾದ ಬಳಿಯ ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ (ಟಿಎಐ) ಪ್ರಧಾನ ಕಚೇರಿಯ ಹೊರಗೆ ಇಂದು ಸಂಜೆ (ಬುಧವಾರ) ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Advertisement
YENİ BİLGİ-1
Türk Havacılık ve Uzay Sanayii AŞ. (TUSAŞ) Ankara Kahramankazan tesislerine yönelik terör saldırısında 2 terörist etkisiz hale getirilmiştir.
Saldırıda maalesef 3 şehidimiz, 14 yaralımız var.
Şehitlerimize Allah’tan rahmet; yaralılarımıza acil şifalar diliyorum.…
— Ali Yerlikaya (@AliYerlikaya) October 23, 2024
Advertisement
ಟಿಎಐ ಕಚೇರಿ ಬಳಿ ಬೃಹತ್ ಸ್ಫೋಟದಿಂದ 3 ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಉಗ್ರರ ಗುಂಪು ಕಟ್ಟಡದ ಒಳಗೆ ಬಂದಿದೆ. ಈ ವೇಳೆ ಓರ್ವ ಉಗ್ರ ತನ್ನನ್ನು ಸ್ಪೋಟಿಸಿಕೊಂಡಿದ್ದಾನೆ. ಓರ್ವ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಅಲ್ಲಿನ ಕಂಪನಿಗಳಲ್ಲಿನ ಉದ್ಯೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಅಂಕಾರಾದಿಂದ ಉತ್ತರಕ್ಕೆ 40 ಕಿಲೋಮೀಟರ್ ದೂರದಲ್ಲಿರುವ ಸಣ್ಣ ಪಟ್ಟಣವಾದ ಕಹ್ರಾಮಂಕಾಜಾನ್‌ನಲ್ಲಿ ಈ ದಾಳಿ ನಡೆದಿದೆ. ಸುದ್ದಿ ಮಾಧ್ಯಮಗಳ ವರದಿಯಲ್ಲಿ ದೊಡ್ಡ ಪ್ರಮಾಣದ ಬೆಂಕಿ ಮತ್ತು ಹೊಗೆಯನ್ನು ತೋರಿಸಿವೆ.
ಉಕ್ರೇನ್‌ನ ಉನ್ನತ ರಾಜತಾಂತ್ರಿಕರು ರಕ್ಷಣಾ ಒಪ್ಪಂದದ ಭಾಗವಾಗಿ ಈ ವಾರ ಇಲ್ಲಿಗೆ ಭೇಟಿ ನೀಡಿದ್ದರು. ಟರ್ಕಿಯ ರಕ್ಷಣಾ ವಲಯವು ಅದರ ಬೈರಕ್ತರ್ ಡ್ರೋನ್‌ಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ದೇಶದ ರಫ್ತು ಆದಾಯದ ಸುಮಾರು 80 ಪ್ರತಿಶತವನ್ನು ಹೊಂದಿದೆ.