ಭೋಪಾಲ್: ಅಪ್ರಾಪ್ತ ಇಬ್ಬರು ಸಹೋದರಿಯರನ್ನು ಅಪಹರಿಸಿ, ಅತ್ಯಾಚಾರ ಎಸೆಗಿದ ಬಳಿಕ ಗ್ರಾಮಕ್ಕೆ ಬಿಟ್ಟು ಹೋದ ಘಟನೆ ಮಧ್ಯಪ್ರದೇಶ ರಾಜ್ಯದ ಅಷ್ಟತೆಹಸಿಲ್ ಎಂಬಲ್ಲಿ ನಡೆದಿದೆ.
9 ಮತ್ತು 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಹೋದರಿಯರು ಅತ್ಯಾಚಾರಕ್ಕೊಳಗಾದ ಬಾಲಕಿಯರು. ಬಾಲಕಿ ಇಬ್ಬರನ್ನು ಅಪಹರಿಸಿದ ಇಂದೋರ್-ಭೋಪಾಲ್ ರಸ್ತೆಯ ಹೋಟೆಲ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ. ಈಗಾಗಲೇ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಅತ್ಯಾಚಾರಗೈದ ಇಬ್ಬರು ಯುವಕರು ಬಾಲಕಿಯರ ಗ್ರಾಮದ ನಿವಾಸಿಗಳಾಗಿದ್ದು, ಇನ್ನಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಲೋಕೇಂದ್ರ (19) ಮತ್ತು ಕ್ರಿಪಲ್ (21) ಬಂಧಿತ ಆರೋಪಿಗಳಾಗಿದ್ದು, ಸಂಜಯ್ ಹಾಗು ರಾಜ್ ಎಂಬಾತರು ಘಟನೆ ಬಳಿಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಶುಕ್ರವಾರ ಬಾಲಕಿಯರಿಬ್ಬರನ್ನು ಅಪಹರಿಸಿದ ಯುವಕರು ಹೋಟೆಲ್ ಗೆ ಕರೆದುಕೊಂಡು ಹೋಗಿ ಇಬ್ಬರನ್ನ ಬೇರೆ ಬೇರೆ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಹೋಟೆಲ್ನಲ್ಲಿ ಕಿರುಚಿದ್ರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಕಾಮುಕರು ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸೆಗಿದ್ದಾರೆ. ಸಂಜೆ ಹೋಟೆಲಿಗೆ ಬಂದ ಮತ್ತಿಬ್ಬರು ಸಹ ಬಾಲಕಿಯರನ್ನು ಅತ್ಯಾಚಾರಗೈದಿದ್ದಾರೆ.
Advertisement
ಆರೋಪಿಗಳು ಶನಿವಾರ ಇಬ್ಬರು ಸಹೋದರಿಯರನ್ನು ಅವರ ಗ್ರಾಮಕ್ಕೆ ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಮನೆ ತಲುಪಿದ ಸಹೋದರಿಯರ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪೊಲೀಸರು ಹೋಟೆಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv