ಬೆಂಗಳೂರು: ತಾನು ಲವ್ ಮಾಡಿದ ಹುಡುಗಿ ಸಿಕ್ಕಿಲ್ಲ ಅಂತಾ ಟೆಕ್ಕಿಯೊಬ್ಬ, ಫ್ಲೆಕ್ಸ್ ಗಳ ಮೂಲಕ ಯುವಕ- ಯುವತಿ ಬಗ್ಗೆ ಅವಹೇಳನಕಾರಿ ಬರೆದು ಅವರು ಕೆಲಸ ಕಳೆದುಕೊಳ್ಳುವಂತೆ ಮಾಡಿದ ಘಟನೆಯೊಂದು ನಡೆದಿದೆ.
ಈ ಘಟನೆ ನಗರದ ಹೆಚ್ಎಸ್ಆರ್ ಲೇಔಟ್ನ ಉದಾನ್ ಕಂಪೆನಿಯಲ್ಲಿ ನಡೆದಿದ್ದು, ಯುವತಿ ಹಾಗೂ ಯುವಕನ ಸ್ನೇಹವನ್ನೇ ತಪ್ಪಾಗಿ ತಿಳಿದ ಟೆಕ್ಕಿ ಆಕೆಯ ಮಾನ ಹರಾಜ್ ಹಾಕಿದ್ದಾನೆ. ತನಗೆ ಈ ಯುವತಿಯ ಪ್ರೀತಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಈ ಹುಡುಗಿಯ ಮಾನ ಹರಾಜು ಹಾಕಿದ್ದಾನೆ. ಅಷ್ಟೇ ಅಲ್ಲ ಆ ಯುವತಿಯನ್ನು ಕೆಲಸದಿಂದ ಕಿತ್ತು ಹಾಕಿಸೋದ್ರಲ್ಲೂ ಯಶಸ್ವಿಯಾಗಿದ್ದಾನೆ.
Advertisement
ಏನಿದು ಘಟನೆ?: ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನ ಉದಾನ್ ಕಂಪೆನಿಯಲ್ಲಿ ಯುವತಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದಳು. ಅದೇ ಕಂಪೆನಿಯಲ್ಲಿ ವೆಂಕಟೇಶ್ ಕೂಡ ಕೆಲಸ ಮಾಡ್ತಿದ್ದ. ಒಂದೇ ಕಂಪನಿ ಆದ್ದರಿಂದ ಇಬ್ಬರೂ ಸ್ನೇಹಿತರಾಗಿದ್ರು. ಆದ್ರೆ ಇವರಿಬ್ಬರ ಸ್ನೇಹ ಸಹಿಸಿಕೊಳ್ಳದ ಅದೇ ಕಂಪನಿಯ ಯಾರೋ ಕಿಡಿಗೇಡಿ, ಆಫೀಸ್ ಗೋಡೆ ಮೇಲೆ ಯುವಕನ ಹೆಸರಲ್ಲಿ ಯುವತಿ ವಿರುದ್ಧ ಇಲ್ಲಸಲ್ಲದ ಆರೋಪ ಹಾಕಿ ಪೋಸ್ಟ್ ಹಾಕಿದ್ದಾನೆ.
Advertisement
ಈ ಪೋಸ್ಟ್ ನ್ನು ನೋಡಿದ ಕಂಪೆನಿ ಆಡಳಿತ ಮಂಡಳಿ ಯಾವುದೇ ವಿಚಾರಣೆ ಮಾಡದೆ ಇಬ್ಬರನ್ನೂ ಕೆಲಸದಿಂದ ಕಿತ್ತು ಹಾಕಿದೆ. ಪೋಸ್ಟ್ ಹಾಕಿರೋ ಬಗ್ಗೆ ಸಿಸಿಟಿವಿ ಫೂಟೇಜ್ ನ್ನು ಕೂಡ ನೀಡದೆ ಸತಾಯಿಸ್ತಾ ಇದೆ. ಇಬ್ಬರು ಟೆಕ್ಕಿಗಳು ಮಾಡದ ತಪ್ಪಿಗೆ ಇದೀಗ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.
Advertisement
ಈ ಹಿಂದೆ ಕೂಡ ಇದೇ ರೀತಿಯ ಘಟನೆ ಸಂಭವಿಸಿದೆ ಅನ್ನೋ ಮಾತುಗಳೂ ಕೇಳಿ ಬಂದಿದೆ. ಅಲ್ಲದೆ ಕಂಪೆನಿಯ ಆಡಳಿತ ಮಂಡಳಿ ಕೂಡ ಈ ಘಟನೆಯಲ್ಲಿ ಭಾಗಿಯಾಗಿದ್ಯಾ ಅನ್ನೋ ಅನುಮಾನ ಕೂಡ ವ್ಯಕ್ತವಾಗಿದೆ.