ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನಲ್ಲಿ ಭಯೋತ್ಪಾದಕರು ನಡೆಸಿದ ಐಇಡಿ (IED) ಸ್ಫೋಟದಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
X ನಲ್ಲಿ ಪೋಸ್ಟ್ ಮಾಡಿರುವ ಸೇನೆ, ವೈಟ್ ನೈಟ್ ಕಾರ್ಪ್ಸ್ ಸಿಬ್ಬಂದಿಯ ಸಾವನ್ನು ದೃಢಪಡಿಸಿದೆ. ಪೋಸ್ಟ್‌ನಲ್ಲಿ, ಇಬ್ಬರು ಧೀರ ಸೈನಿಕರ ತ್ಯಾಗಕ್ಕೆ ವೈಟ್ ನೈಟ್ ಕಾರ್ಪ್ಸ್ ವಂದನೆ ಸಲ್ಲಿಸುತ್ತದೆ ಎಂದು ಸೇನೆ ತಿಳಿಸಿದೆ.
Advertisement
Advertisement
ಸೈನಿಕರು ನಿಯಂತ್ರಣ ರೇಖೆಯಲ್ಲಿ (LoC) ಗಸ್ತು ತಿರುಗುತ್ತಿದ್ದ ವೇಳೆ IED ದಾಳಿ ನಡೆದಿದೆ. ದಾಳಿ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಸೇನೆ ತಿಳಿಸಿದೆ.