ದಾವಣಗೆರೆ: ಹೊನ್ನೂರು ಗೊಲ್ಲರಹಟ್ಟಿಯಲ್ಲಿ ಡಿ.5 ರಂದು ಮಹಿಳೆಯನ್ನು ಕಚ್ಚಿ ಕೊಂದಿದ್ದ ರಾಟ್ ವೀಲರ್ ನಾಯಿಗಳು ಸಹ ಸಾವನ್ನಪ್ಪಿವೆ.
ಗ್ರಾಮಸ್ಥರು ನಾಯಿಗಳನ್ನು ಸೆರೆಹಿಡಿಯಲು ನಿರಂತರವಾಗಿ ಓಡಿಸಿದ್ದರಿಂದ ನಾಯಿಗಳು ನಿತ್ರಾಣಗೊಂಡಿದ್ದವು. ಬಳಿಕ ಅವುಗಳನ್ನು ಸೆರೆ ಹಿಡಿದು ಎಬಿಸಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ನಿರಂತರವಾಗಿ ಓಡಿದ್ದರಿಂದ ಅಂತರಿಕ ರಕ್ತಸ್ರಾವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ದಾವಣಗೆರೆ | ಮಹಿಳೆಯನ್ನು ಕಚ್ಚಿ ಕಚ್ಚಿ ಕೊಂದ ರಾಟ್ ವೀಲರ್
ರಾಟ್ ವೀಲರ್ ನಾಯಿಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಲೀಕರು ಬಿಟ್ಟು ಹೋಗಿದ್ದರು. ಅದೇ ರಸ್ತೆಯಲ್ಲಿ ಬರುತ್ತಿದ್ದ ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ ಅವರ ಮೇಲೆ ದಾಳಿ ಮಾಡಿ, ಕೊಂದಿದ್ದವು.
ಸಾವನ್ನಪ್ಪಿದ ನಾಯಿಗಳನ್ನು ಎಬಿಸಿ ಕೇಂದ್ರದಿಂದ ಅಂತ್ಯಸಂಸ್ಕಾರ ಮಾಡಲಾಗಿದೆ. ಇದನ್ನೂ ಓದಿ: ಕೈಯಲ್ಲಿ ಬಂದೂಕು ಹಿಡಿದು ಗಸ್ತು ತಿರುಗುತ್ತಿದ್ದ ಪೊಲೀಸರನ್ನೇ ಬೆದರಿಸಿ ಕಳ್ಳರ ಗ್ಯಾಂಗ್ ಪರಾರಿ

