ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಎರಡು ಪವರ್ ಸೆಂಟರ್ ಇವೆ. ಈ ಪವರ್ ಸೆಂಟರ್‌ಗಳು ಯಾವಾಗ ಬ್ಲ್ಯಾಸ್ಟ್ ಆಗುತ್ತೋ ಗೊತ್ತಿಲ್ಲ ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿ.ಟಿ ರವಿ (C.T Ravi) ಕೇಸ್ ವಿಚಾರವಾಗಿ ಪೊಲೀಸರ ವರ್ತನೆ ಬಗ್ಗೆ ವಿಧಾನಸೌಧದಲ್ಲಿ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್‌ನಲ್ಲಿ ಎರಡು ಪವರ್ ಸೆಂಟರ್ ಇವೆ. ಸಿಎಂ ಸೆಂಟರ್ ಮತ್ತು ಡಿಸಿಎಂ ಸೆಂಟರ್ ಇದೆ. ಸಿಎಂ ಪವರ್ ಸೆಂಟರ್‌ನ್ನು ಡಿಸಿಎಂ ಪವರ್ ಸೆಂಟರ್ ನುಂಗಿ ಹಾಕಿದೆ ಎಂದಿದ್ದಾರೆ.
ಈ ವಿಚಾರದ ಬಗ್ಗೆ ಗೃಹ ಸಚಿವರು ನನಗೇನು ಗೊತ್ತಿಲ್ಲ ಅಂದರು. ಸಿಎಂ ಅವರು ಕೂಡಾ ಮಾತಾಡಿಲ್ಲ. ಹೀಗಾಗಿ ಇದರ ಹಿಂದೆ ಇರೋರು ಯಾರು ಎಂದು ಈ ಸರ್ಕಾರ ಹೇಳಬೇಕು. ಯಾವಾಗಾ ಈ ಸರ್ಕಾರ ಬ್ಲ್ಯಾಸ್ಟ್ ಆಗುತ್ತೋ ಗೊತ್ತಿಲ್ಲ. ಸಿಟಿ ರವಿ ಕೇಸ್‌ನಲ್ಲಿ ಪೊಲೀಸರ ವರ್ತನೆ ಈ ಪವರ್ ಸೆಂಟರ್‌ಗಳ ನಡುವಿನ ಪವರ್ ಕಿತ್ತಾಟ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.