ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ಸಿಬ್ಬಂದಿ ನಿರ್ಲಕ್ಷ್ಯದಿಂದ ಬೇಡ್ ಇಲ್ಲದೆ ಇಬ್ಬರು ಮಹಿಳೆಯರು ಒಂದೇ ಬೆಡ್ ಮೇಲೆ ಮಲಗಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದ ವೀಡಿಯೋ ವೈರಲ್ ಆಗಿದೆ.
ಕಿಮ್ಸ್ ಪ್ರಸೂತಿ, ಮಹಿಳಾ ಮತ್ತು ಮಕ್ಕಳ ಘಟಕದ ವಾರ್ಡ್‌ನಲ್ಲಿ ಹುಬ್ಬಳ್ಳಿ (Hubballi) ನಿವಾಸಿ ಸರಳಾ ಮತ್ತು ಗ್ರಾಮೀಣ ಭಾಗದ ಮಂಜುಳಾ ಎಂಬ ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದರು. ಸರಳಾ ಬೆಡ್ ಮೇಲೆ ಮಲಗಿದ್ದು, ಎಚ್ಚರವಾಗಿ ಮೂತ್ರ ವಿಸರ್ಜನೆಗಾಗಿ ಶೌಚಾಲಯಲಕ್ಕೆ ತೆರಳಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಮಂಜುಳಾ ಎಂಬವರು ಬೆಡ್ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಇದನ್ನು ಗಮನಿಸಿದ ಸರಳಾ ವಾರ್ಡ್ ನರ್ಸ್‌ಗೆ ತಿಳಿಸಿದ್ದಾರೆ. ನರ್ಸ್ ಬೇರೆ ಬೆಡ್ ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಬೆಡ್ ಸಿಗುವವರೆಗೂ ನೆಲೆದ ಮೇಲೆ ಮಲಗುವಂತೆ ತಿಳಿಸಿದ್ದಾರೆ.
Advertisement
Advertisement
ಅದರಂತೆ ಸುಮಾರು 2 ಗಂಟೆ ಸರಳಾ ನೆಲದ ಮೇಲೆ ವಿಶ್ರಾಂತಿ ಪಡೆದು, ಬಳಿಕ ನರ್ಸ್ ಬಳಿ ಹೋಗಿದ್ದಾರೆ. ಆಗ ನರ್ಸ್ ಬೆಡ್ ಸಿಕ್ಕಿಲ್ಲ ಸಿಕ್ಕಾಗ ಕರೆಯುತ್ತೇನೆಂದು ಗದರಿಸಿದ್ದಾರೆ. ಆದರೆ ಸರಳಾಗೆ ಆಪರೇಷನ್ ಆಗಿರುವ ಹಿನ್ನೆಲೆ ಜಾಸ್ತಿ ಹೊತ್ತು ನೆಲದ ಮೇಲೆ ಮಲಗಲು ಆಗಿಲ್ಲ. ಹೀಗಾಗಿ ತಮ್ಮ ಬೆಡ್‌ಗೆ ಹೋಗಿ ಮಂಜುಳಾ ಅನುಮತಿ ಪಡೆದು ಇಬ್ಬರು ಒಂದೇ ಬೆಡ್‌ನಲ್ಲಿ ಮಲಗಿದ್ದಾರೆ.
Advertisement
ಒಂದೇ ಬೆಡ್‌ನಲ್ಲಿ ಒಬ್ಬರ ಕಾಲ ಬಳಿ ಮತ್ತೊಬ್ಬರ ಮುಖ ಮಾಡಿ ಮಧ್ಯವಯಸ್ಕ ಮಹಿಳೆಯರು ವಿಶ್ರಾಂತಿ ಪಡೆದಿದ್ದಾರೆ. ಸ್ವಲ್ಪ ಆಚೆ, ಈಚೆ ಆದ್ರೆ ನೆಲಕ್ಕೆ ಬೀಳುವ ಸ್ಥಿತಿ, ಆತಂಕದಲ್ಲಿಯೇ ಮೈ ಬಿಗಿ ಹಿಡಿದುಕೊಂಡು ಮಲಗಿದ್ದಾರೆ. ಒಂದೇ ಬೆಡ್‌ನಲ್ಲಿ ಇಬ್ಬರು ನರಳಾಡುವ ದೃಶ್ಯ ಕಂಡು ಸಹ ರೋಗಿ ಸಂಬಂಧಿ ಈ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋ ಈಗ ಫುಲ್ ವೈರಲ್ ಆಗಿದೆ.
Advertisement
ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚರವಾಗದ ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕರಣಕ್ಕೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ಆ ಸಮಯದಲ್ಲಿ ಹೆಚ್ಚು ಜನ ರೋಗಿಗಳು ದಾಖಲಾದ ಹಿನ್ನೆಲೆ ಬೆಡ್ ಅಭಾವ ಸೃಷ್ಟಿಯಾಗಿತ್ತು. ಇದರಲ್ಲಿ ನಮ್ಮ ಸಿಬ್ಬಂದಿಯದ್ದು ತಪ್ಪಾಗಿದೆ. ಮುಂದೆ ಈ ರೀತಿಯಲ್ಲಿ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಿನಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಬಡರೋಗಿಗಳ ಆರೈಕೆಗೆ ನೇಮಕ ಮಾಡಿರುವ ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿಗಳು ನಿತ್ಯ ನರಕದರ್ಶನ ಮಾಡುವಂತಾಗಿದೆ. ಮೊನ್ನೆ ನೆಲದ ಮೇಲೆ ವೃದ್ಧೆಗೆ ಚಿಕಿತ್ಸೆ ನೀಡಿ ಸುದ್ದಿಯಾಗಿದ್ದ ಕಿಮ್ಸ್ ಆಡಳಿತ ಮಂಡಳಿ, ಈಗ ಮತ್ತೆ ಅಂತಹದ್ದೇ ತಪ್ಪು ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.