ಇಟಾನಗರ: ಅರುಣಾಚಲ ಪ್ರದೇಶದಲ್ಲಿ ರಸ್ತೆ ನಿರ್ಮಾಣದ ವೇಳೆ ನಾಪತ್ತೆಯಾಗಿದ್ದ ಇಬ್ಬರು ಕಾರ್ಮಿಕರು ಪತ್ತೆಯಾಗಿದ್ದಾರೆ.
20 ದಿನಗಳ ಹಿಂದೆ ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯ ಭಾರತ-ಚೀನಾ ಗಡಿಯ ಬಳಿ 19 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದರು. ಇಲ್ಲಿವರೆಗಿನ ಶೋಧ ಕಾರ್ಯಾಚರಣೆಯಲ್ಲಿ 10 ಮಂದಿ ಸಿಕ್ಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಜಾ ಸಾಗಾಟ ಎಂದು ತನಿಖೆ ಮಾಡಿದ ಪೊಲೀಸರಿಗೆ ತಿಳಿಯಿತು ಕೊಲೆ ರಹಸ್ಯ
Advertisement
Advertisement
ಕುರುಂಗ್ ಕುಮೇ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಬೆಂಗಿಯಾ ನಿಘೀ ಅವರು ಈ ಕುರಿತು ಮಾತನಾಡಿದ್ದು, ರಕ್ಷಿಸಲ್ಪಟ್ಟ ಇಬ್ಬರು ಕಾರ್ಮಿಕರನ್ನು ಖೋಲೆಬುದ್ದೀನ್ ಶೇಕ್(27) ಮತ್ತು ಶಮೀದುಲ್ ಶೇಕ್(19) ಎಂದು ಗುರುತಿಸಲಾಗಿದೆ. ಇವರಿಬ್ಬರು ಅಸ್ವಸ್ಥರಾಗಿದ್ದು, ನಹರ್ಲಾಗುನ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
Advertisement
ಜಿಲ್ಲಾಧಿಕಾರಿ ಈ ಕುರಿತು ಮಾತನಾಡಿದ್ದು, ವಿಷಕಾರಿ ಹಾವುಗಳ ಹೆದರಿಕೆಯಿಂದಾಗಿ ಸ್ಥಳೀಯ ಮಾರ್ಗದರ್ಶಿ ಸೇರಿದಂತೆ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‍ಡಿಆರ್‌ಎಫ್) ಭಾನುವಾರ ತಡರಾತ್ರಿ ಕಾರ್ಯಾಚರಣೆಯನ್ನು ನಿಲ್ಲಿಸಿತು. ಆದರೆ ಮತ್ತೆ ಸೋಮವಾರ ನಾಪತ್ತೆಯಾಗಿರುವ 9 ಕಾರ್ಮಿಕರಿಗಾಗಿ ಶೋಧ ಕಾರ್ಯಾಚರಣೆ ಪುನರಾರಂಭವಾಗಲಿದೆ. ಪ್ರತಿಕೂಲ ಹವಾಮಾನದಿಂದಾಗಿ ಭಾರತೀಯ ವಾಯುಪಡೆ(ಐಎಎಫ್) ಹೆಲಿಕಾಪ್ಟರ್ ಭಾನುವಾರ ಕಾರ್ಯಾಚರಣೆಯಲ್ಲಿ ತೊಡಗಿಲ್ಲ ಎಂದಿದ್ದಾರೆ.
Advertisement
ಎಸ್‍ಡಿಆರ್‌ಎಫ್‍ನಿಂದ ರಕ್ಷಿಸಲ್ಪಟ್ಟ ಇಬ್ಬರು ಕಾರ್ಮಿಕರು ಈ ಕುರಿತು ಮಾತನಾಡಿದ್ದು, ದಟ್ಟವಾದ ಅರಣ್ಯ ಮತ್ತು ಪರ್ವತ ಪ್ರದೇಶದಲ್ಲಿ ನಡೆಯಲು ಸಾಧ್ಯವಾಗದೆ ಇನ್ನೂ ನಾಲ್ವರು ಕಾರ್ಮಿಕರು ನಮ್ಮ ಹಿಂದೆ ಇದ್ದರು ಎಂದು ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ಬಾಯಿಗೆ ಕಹಿ ಇದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು ‘ಹಾಗಲಕಾಯಿ ಡ್ರೈ ಪಲ್ಯ’
ನಡೆದಿದ್ದೇನು?
19 ಕಾರ್ಮಿಕರು ಹೆಚ್ಚಾಗಿ ಮುಸ್ಲಿಮರು ಮತ್ತು ಅಸ್ಸಾಂ ನಿವಾಸಿಗಳು. ಬಾರ್ಡರ್ ರೋಡ್ ಆರ್ಗನೈಸೇಶನ್(BRO) ರಸ್ತೆ ನಿರ್ಮಾಣಕ್ಕಾಗಿ ಗುತ್ತಿಗೆದಾರರಿಂದ ಕೆಲಸ ಮಾಡಲು ತೊಡಗಿಸಿಕೊಂಡಿದ್ದರು. ಈದ್ ಆಚರಿಸಲು ಕಾರ್ಮಿಕರು ರಜೆ ನೀಡಲು ಗುತ್ತಿಗೆದಾರರು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಕಾರ್ಮಿಕರು ಜುಲೈ 5 ರಂದು ರಾತ್ರಿ ತಮ್ಮ ಪ್ರಾಜೆಕ್ಟ್ ಸೈಟ್ ಕ್ಯಾಂಪ್‍ನಿಂದ ಪಲಾಯನ ಮಾಡಿದ್ದರು.
ಆದರೆ 19 ಕಾರ್ಮಿಕರು ವಿಷಕಾರಿ ಹಾವುಗಳು ಮತ್ತು ಕಾಡು ಪ್ರಾಣಿಗಳಿಂದ ಮುತ್ತಿಕೊಂಡಿರುವ ದಟ್ಟ ಅರಣ್ಯವನ್ನು ಪ್ರವೇಶಿಸಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯನ್ನು ಸ್ವತಃ ಮೇಲ್ವಿಚಾರಣೆ ಮಾಡುತ್ತಿರುವ ಜಿಲ್ಲಾಧಿಕಾರಿ ಹೇಳಿದರು.