ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (National Park) ಚೀತಾ ಮರಿಯೊಂದು (Cheetah Cubs) ಮೃತಪಟ್ಟ ಒಂದೇ ವಾರದ ಅಂತರದಲ್ಲಿ ಇನ್ನೆರಡು ಮರಿಗಳು ಗುರುವಾರ ಮೃತಪಟ್ಟಿರುವ ಘಟನೆ ನಡೆದಿದೆ.
ಈ ವರ್ಷದ ಮಾರ್ಚ್ 24ರಂದು ʻಜ್ವಾಲಾʼ ಎಂಬ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇನ್ನೊಂದು ಮರಿಯ ಸ್ಥಿತಿ ಕೂಡ ಚಿಂತಾಜನಕವಾಗಿದ್ದು ಅದರ ಮೇಲೆ ವೈದ್ಯರು ಸತತ ನಿಗಾ ಇರಿಸಿದ್ದಾರೆ. ಇದನ್ನೂ ಓದಿ: New Parliament Building ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಜೋರು – ವಿಪಕ್ಷಗಳ ಬಹಿಷ್ಕಾರ ಅಸ್ತ್ರಕ್ಕೆ ಪ್ರಧಾನಿ ಮೋದಿ ಕೌಂಟರ್
ಹೆಚ್ಚಾಗಿ ಚೀತಾ ಮರಿಗಳು 8 ವಾರಗಳಾಗುತ್ತಲೇ ತಮ್ಮ ತಾಯಿಯ ಸುತ್ತ ಸದಾ ಇರುತ್ತವೆ. ಹಾಗೆಯೇ ಈ ಮರಿಗಳೂ ಇದ್ದವು. ಆದರೆ ಚಿರತೆ ತಜ್ಞರ ಪ್ರಕಾರ ಅಫ್ರಿಕಾದಲ್ಲಿ ಚೀತಾ ಮರಿಗಳ ಉಳಿವಿನ ಪ್ರಮಾಣ ತುಂಬಾ ಕಡಿಮೆಯಾಗಿದೆ. ಸತ್ತ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಜನ ಹುಚ್ಚು ಮೋದಿ ಅಂತಿದ್ದಾರೆ- ಮತ್ತೆ ನಾಲಗೆ ಹರಿಬಿಟ್ಟ ಕೈ ನಾಯಕ ಅಧೀರ್

ಕಳೆದ ಎರಡು ತಿಂಗಳ ಅವಧಿಯಲ್ಲಿ ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಮೃತ ಚೀತಾಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದಿಂದ ತರಿಸಲಾಗಿದ್ದ ಮೂರು ಚೀತಾಗಳು ಮೃತಪಟ್ಟಿವೆ. ನಮೀಬಿಯಾದಿಂದ ತರಿಸಲಾಗಿದ್ದ ಸಾಶಾ ಹೆಸರಿನ ಹೆಣ್ಣು ಚೀತಾ ಮಾರ್ಚ್ 27 ರಂದು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿತ್ತು. ಆಫ್ರಿಕಾದಿಂದ ತಂದಿದ್ದ ಚೀತಾ ಉದಯ್ ಏಪ್ರಿಲ್ 13ರಂದು ಮೃತಪಟ್ಟಿತ್ತು. ಮೇ 9ರಂದು ದಕ್ಷಿಣ ಆಫ್ರಿಕಾದಿಂದ ತರಲಾದ ದಕ್ಷಾ ಗಂಡು ಚಿರತೆಯೊಂದಿಗಿನ ಸೆಣಸಾಟದ ವೇಳೆ ಉಂಟಾದ ಗಾಯದಿಂದಾಗಿ ಮೃತಪಟ್ಟಿತ್ತು.