ಶ್ರೀನಗರ: ಕೆಲ ದಿನಗಳಿಂದ ಶಾಂತಿಯುತವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಮತ್ತೆ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದೆ.
ಭಾನುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ (Ganderbal) ಜಿಲ್ಲೆಯ ಸೋನಾಮಾರ್ಗ್ ಪ್ರದೇಶದಲ್ಲಿ ಆರು ಮಂದಿ ಕಾರ್ಮಿಕರನ್ನು (Migrant Workers) ಮತ್ತು ವೈದ್ಯರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಸುರಂಗದ ಬಳಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಸದ್ಯ ಗುಂಡಿನ ದಾಳಿ ನಡೆದ ಸ್ಥಳಕ್ಕೆ ಭದ್ರತಾ ಪಡೆಗಳು ತಲುಪಿದ್ದು, ಪ್ರದೇಶವನ್ನು ಸುತ್ತುವರಿದಿವೆ. ಭಯೋತ್ಪಾದಕರಿಗಾಗಿ ಹುಡುಕಾಟ ನಡೆಸಿವೆ. ಇದನ್ನೂ ಓದಿ: ಕ್ಲೋರೇಟ್, ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಿ CRPF ಶಾಲೆ ಬಳಿ ಸ್ಫೋಟ – NIA ತೀವ್ರ ಶೋಧ
ಪ್ರಾಥಮಿಕ ಮೂಲಗಳ ಪ್ರಕಾರ, ದಾಳಿಗೊಳಗಾದ ಕಾರ್ಮಿಕರು ಝಡ್ ಮೋರ್ಹ್ ಸುರಂಗದಲ್ಲಿ ಕೆಲಸ ಮಾಡುವ ತಂಡದ ಭಾಗವಾಗಿದ್ದರು. ಈ ಸುರಂಗ ಮಾರ್ಗವು ಗಗನೀರ್ ನಿಂದ ಮಧ್ಯ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ್‌ಗೆ ಸಂಪರ್ಕಿಸುತ್ತದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್ | ಮತ್ತೋರ್ವ ಆರೋಪಿ ಅರೆಸ್ಟ್ – ಬಂಧಿತರ ಸಂಖ್ಯೆ 10ಕ್ಕೆ ಏರಿಕೆ